ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಒಂದು ವರ್ಷದ ಹಿಂದೆ ಇದೇ ದಿನ ಅಪ್ಪು ಮಾಡಿದ್ದ ಟ್ವೀಟ್ ವೈರಲ್
ಅಪ್ಪು ಅವರ ಪ್ರತಿಯೊಂದು ಮಾತು, ಪ್ರತಿಯೊಂದು ಪೋಸ್ಟ್ ಕೂಡ ಅಭಿಮಾನಿಗಳ ಮನಸಲ್ಲಿ ಅಚ್ಚಾಗಿ ಉಳಿದಿದೆ. ಈ ಹಿಂದೆ ಪುನೀತ್ ಹೇಳಿದ್ದ ಪ್ರತಿಯೊಂದು ಮಾತು, ಮಾಡಿದ್ದ ಪ್ರತಿಯೊಂದು ಟ್ವೀಟ್ ಕೂಡ ಆಗಾಗ ವೈರಲ್ ಆಗುತ್ತನೆ ಇರುತ್ತದೆ. ಇದೀಗ ಕಳೆದ ವರ್ಷ ಇದೇ ದಿನ ಪುನೀತ್ ಮಾಡಿದ್ದ ಟ್ವೀಟ್ ಇಂದು ವೈರಲ್ ಆಗಿದೆ.
2021ರ ಅಕ್ಟೋಬರ್ 27ರಂದು ಅಪ್ಪು ಪೋಸ್ಟ್ ಮಾಡಿದ್ದು ಇದೀಗ ಆ ಪೋಸ್ಟ್‌ಗೂ ಒಂದು ವರ್ಷ ತುಂಬಿದೆ. 2021ರ ಅಕ್ಟೋಬರ್ 27ರಂದು ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್, ಗಂಧದ ಗುಡಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದರು. ಒಂದು ಟ್ವೀಟ್ ಮಾಡಿದ್ದರು. ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು… ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು… ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು… ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ..’ ಎಂದು ಬರೆದುದಕೊಂಡಿದ್ದರು. 2021ರ ನವೆಂಬರ್ 1ರಂದು ‘ಗಂಧದ ಗುಡಿ’ ಟೈಟಲ್ ಅನೌನ್ಸ್ ಮಾಡುವ ಬಗ್ಗೆಯೂ ಸುಳಿವು ನೀಡಿದ್ದರು. ಆದರೆ ಅಕ್ಟೋಬರ್ 29ರಂದು ಪುನೀತ್ ನಿಧನರಾದರು.
