• March 17, 2026

ಅನಂತ್ ನಾಗ್ ರ ಒಂದೇ ಒಂದು ಮಾತಿಗೆ ಗಾಳಿಪಟ2ಗೆ ಬಂಡವಾಳ ಹೂಡಿದ ನಿರ್ಮಾಪಕ ರಮೇಶ್ ರೆಡ್ಡಿ

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2ಸಿನಿಮಾ ಸೂಪರ್ ಹಿಟ್ ಆಗಿದೆ. ಅಭಿಮಾನಿಗಳು ಮುಗಿಬಿದ್ದು ಥಿಯೇಟರ್ ಗೆ ಆಗಮಿಸಿ ಸಿನಿಮಾ ನೋಡ್ತಿದ್ದಾರೆ. ಗಲ್ಲ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿರೋ ಖುಷಿಯಲ್ಲಿ ಇಡೀ ಗಾಳಿಪಟ ತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಸಕ್ಸಸ್ ಮೀಟ್ ನಲ್ಲಿ ಭಾಗಿಯಾದ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಸಿನಿಮಾದ ಸಕ್ಸಸ್ ಗೆ ಕಾರಣರಾದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ಮಾಪಕ ಎನಿಸಿಕೊಂಡಿರುವ ರಮೇಶ್ ರೆಡ್ಡಿ ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗ್ಲಿ ಬಳಿಯ ದೊಡ್ಡ ಗೊಲ್ಲಹಳ್ಳಿ ಗ್ರಾಮದವರು. ಮೊದಲ ಗಾರೆ ಕೆಲಸ ಮಾಡುತ್ತಿದ್ದ ರಮೇಶ್ ಅದೇ ಕೆಲಸವನ್ನು ನಂಬಿಕೊಂಡು 1982ರಲ್ಲಿ ಬೆಂಗಳೂರಿಗೆ ಬಂದರು. ಗಾರೆ ಕೆಲಸದಿಂದ ಮೇಸ್ತ್ರಿ ಆಗಿ, ಬಳಿಕ ಗುತ್ತಿಗೆದಾರನಾಗಿ ಇದೀಗ ಸಿನಿಮಾ ನಿರ್ಮಾಣಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಂದ ಹಾಗೆ ಮೊದಲು ರಮೇಶ್ ರೆಡ್ಡಿ ಗಾಳಿಪಟ 2 ಸಿನಿಮಾದ ಕಥೆಯನ್ನೇ ಕೇಳಿರಲಿಲ್ಲವಂತೆ. ಅನಂತ್ ನಾಗ್ ಹೇಳಿದ ಒಂದೇ ಒಂದು ಮಾತಿನಿಂದ ಸಿನಿಮಾಗೆ ಬಂಡವಾಳ ಹೂಡೋಕೆ ಸೈ ಎಂದಿದ್ದಾರೆ. ಸಿನಿಮಾಗೆ ಪ್ರೇಕ್ಷಕರು ನೀಡಿದ ರೆಸ್ಪಾನ್ಸ್ ನೋಡಿ ಸಖತ್ ಖುಷಿಯಾಗಿದೆ. ಟಿವಿ ಹಾಗೂ ಪತ್ರಿಕಾ ಮಾಧ್ಯಮದವರು ನೀಡಿದ ಬೆಂಬಲದಿಂದಲೇ ನಾನು ಇಂದು ಪಾಸ್ ಆಗಿದ್ದೇನೆ. ನಾನು ಈಗಾಗ್ಲೆ ಗಾಳಿಪಟ 2 ಸಿನಿಮಾದಲ್ಲಿ ಪಾಸ್ ಆಗಿದ್ದೇನೆ ಎಂದು ಗಾಳಿಪಟ 2 ಸಿನಿಮಾದ ಸಕ್ಸಸ್ ಗೆ ಕಾರಣರಾದ ಪ್ರತಿಯೊಬ್ಬರಿಗೂ ಥ್ಯಾಕ್ಸ್ ಹೇಳಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರಿಗೆ ವೇದಿಕೆ ಮೇಲೆ ಧನ್ಯವಾದ ತಿಳಿಸಿದರು. ಈಗಾಗ್ಲೆ ನಾನು ಪಾಸ್ ಆಗಿದ್ದು ಮುಂದಿನ ಪ್ರೆಸ್ ಮೀಟ್ ನಲ್ಲಿ ಸಿನಿಮಾದ ಕಲೆಕ್ಷನ್ ಕುರಿತಾಗಿ ಹೇಳೋದಾಗಿ ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now