ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?
‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಆಗಮಿಸಲು ಈಗಾಗಲೇ ಸಾಕಷ್ಟು ಮಂದಿಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೂರ್ಯ, ಬಾಲಯ್ಯ, ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ್, ಅಖಿಲ್, ಪ್ರಭುದೇವ್, ರಾಣಾ ದಗ್ಗೂಬಾಟಿ ಸೇರಿದಂತೆ ಸಾಕಷ್ಟು ಸ್ಟಾರ್ ನಟರು‘ಪುನೀತ್ ಪರ್ವ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಎಲ್ಲ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಹ ಕಲಾವಿದರು ಸೇರಿದಂತೆ ಇಡೀ ದೊಡ್ಮನೆ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
‘ಪುನೀತ್ ಪರ್ವ’ ಕಾರ್ಯಕ್ರಮದಲ್ಲಿ ಕುನಾಲ್ ಗಾಂಜಾವಾಲ, ಅರ್ಮಾನ್ ಮಲಿಕ್ ಗಾನ ಸುಧೆ ಹರಿಸಲಿದ್ದು, ಪ್ರಭುದೇವ, ರಮ್ಯಾ ಡ್ಯಾನ್ಸ್ ಮಾಡಲಿದ್ದಾರೆ. ಕಾರ್ಯಕ್ರಮ ಎಲ್ಲರ ಕಣ್ಣಿಗೆ ಹಬ್ಬದ ಹಾಗೆ ಇರಲಿದ್ದು ಈ ಕಾರ್ಯಕ್ರಮವನ್ನು ಅಭಿಮಾನಿಗಳಿಗಾಗಿ ಮಾಡುತ್ತಿದ್ದೆ ದೊಡ್ಮನೆ ಕುಟುಂಬ. ಹೀಗಾಗಿ ಎಷ್ಟೇ ಜನ ಬಂದರು ಕಾರ್ಯಕ್ರಮ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡುತ್ತಿದೆ ಡಾ.ರಾಜ್ ಕುಮಾರ್ ಕುಟುಂಬ.
