ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಣವೀರ್ ಸಿಂಗ್ ಕುರಿತು ಐದು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಶಾರುಖ್ ಖಾನ್
2017ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ನಟನೆಯ ಡಿಯರ್ ಜಿಂದಗಿ ಚಿತ್ರದ ಪ್ರಮೋಷನ್ ಗಾಗಿ ಶಾರುಖ್ ಹಾಗೂ ಆಲಿಯಾ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ವೇಳೆ ಕರಣ್, ಶಾರುಖ್ ಖಾನ್ ಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಅಂದು ಶಾರುಖ್ ನೀಡಿದ್ದ ಉತ್ತರ ಇಂದು ನಿಜವಾಗಿದೆ.
‘ರಣವೀರ್ ಸಿಂಗ್ ಅರೆಸ್ಟ್ ಆಗುವುದು ಅಥವಾ ಅವರ ವಿರುದ್ಧ ಕೇಸ್ ದಾಖಲಾಗುವುದು ಯಾವ ಕಾರಣಕ್ಕೆ’ ಎಂದು ಕರಣ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಶಾರುಖ್ ಖಾನ್ ರಣವೀರ್ , ‘ಬಟ್ಟೆ ಧರಿಸಿದ್ದಕ್ಕೆ ಅಥವಾ ಬಟ್ಟೆ ಧರಿಸದೆ ಇರುವುದಕ್ಕೆ’ ಎಂದು ಹಾಸ್ಯ ರೀತಿಯಲ್ಲಿ ಉತ್ತರಿಸಿದ್ದು ಇದೀಗ ನಿಜವಾಗಿದೆ.
