• January 2, 2026

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಮತ್ತೆ FIR: ಪತಿಯಿಂದಲೇ ದೂರು ದಾಖಲು

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಕಳೆದ ಕೆಲವು ದಿನಗಳ ಹಿಂದೆ ಎಫ್ ಐ ಆರ್ ದಾಖಲಾಗಿತ್ತು. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಸ್ವರ್ಣಲತಾ ವಿರುದ್ಧ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ. ನಟಿ ಶ್ರೀಲೀಲಾ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿದ್ದರೆ ಅವರ ತಾಯಿ ಸ್ವರ್ಣಲತಾ ಪದೇ ಪದೇ ನೆಗೆಟಿವ್ ಕಾರಣದಿಂದ ಸುದ್ದಿಯಾಗ್ತಿದ್ದಾರೆ. ಅಲಯನ್ಸ್ ವಿವಿಗೆ ನುಗ್ಗಿ ದಾಂದಲೆ ಮಾಡಿದ ಕಾರಣಕ್ಕೆ ಸ್ವರ್ಣಲತಾ ಮೇಲೆ ಈಗಾಗ್ಲೆ ಎಫ್ ಐ ಆರ್ ದಾಖಲಾಗಿದೆ. ಇದೀಗ ಸ್ವತಃ ಸ್ವರ್ಣಲತಾ ಪತಿ ಸುಭಾಕರ್ ರಾವ್ ಸ್ವರ್ಣಲತಾ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸ್ವರ್ಣಲತಾ ‘ನನ್ನ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಬೀಗ ಒಡೆದು ನನ್ನ ಮನೆಗೆ ನುಗ್ಗಿದ್ದಾರೆ’ ಎಂದು ಆಡುಗೋಡಿ ಠಾಣೆಗೆ ಸುಭಾಕರ್ ರಾವ್ ದೂರು ನೀಡಿದ್ದಾರೆ. ಬೆಂಗಳೂರಿನ ಕೋರಮಂಗಲದ ಪ್ರೆಸ್ಟೀಜ್​​ ಅಪಾರ್ಟ್​​​ಮೆಂಟ್​​ನಲ್ಲಿ ಸುಭಾಕರ್ ರಾವ್ ಅವರ ಫ್ಲ್ಯಾಟ್ ಇದೆ. ಈ ಹಿಂದೆ ಅದನ್ನು ಸ್ವರ್ಣಲತಾಗೆ ನೀಡಿದ್ದರು. ಆದರೆ ನಂತರ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಆದ ಕಾರಣ ಸುಭಾಕರ್ ಫ್ಲ್ಯಾಟ್​ಗೆ ಬೀಗ ಹಾಕಿದರು. ಆದರೆ ಅಕ್ಟೋಬರ್​ 3ರಂದು ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್​ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸುಭಾಕರ್​ ಆರೋಪಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now