ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕರ್ನಾಟಕದಾದ್ಯಂತ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನಡೆಯಲಿದೆ ಫುಡ್ ಫೆಸ್ಟಿವಲ್
ಭೋಜನ ಪ್ರಿಯ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಗಂಧದ ಗುಡಿ ಚಿತ್ರದ ವಿನೂತನ ಪ್ರಚಾರಕ್ಕೆ ಅಪ್ಪು ಅಭಿಮಾನಿಗಳು ರೆಡಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಬೋಜನ ಪ್ರಿಯ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಾಗಿ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟಿವಲ್ ನಡೆಸಲು ಅಭಿಮಾನಿಗಳು ಮುಂದಾಗಿದ್ದಾರೆ. ಅಕ್ಟೋಬರ್ 22 ಹಾಗೂ 23ರಂದು ರಾಜ್ಯಾದ್ಯಂತ ಫುಡ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗುತ್ತಿದೆ.
ಕರ್ನಾಟಕದ ಮೂಲೆ ಮೂಲೆಗಳಲ್ಲೂ ಪುನೀತ್ ಫುಡ್ ಫೆಸ್ಟಿವಲ್ ಆಯೋಜನೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಎಷ್ಟು ಸಾಧ್ಯವೋ ಅಷ್ಟು ಹೊಟೇಲ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಇಷ್ಟು ಪಡುತ್ತಿದ್ದ ಆಹಾರವನ್ನು ಸಿದ್ಧಪಡಿಸಲಿದ್ದು ಈ ಮೆನ್ಯೂಗೆ ಫ್ಲೇವರ್ಸ್ ಆಫ್ ಗಂಧದ ಗುಡಿ ಎಂದು ಹೆಸರಿಡಲಾಗಿದೆ.
ಸಸ್ಯಹಾರಿ ಹಾಗೂ ಮಾಂಸಹಾರಿ ಎರಡು ಹೋಟೆಲ್ ಗಳಲ್ಲೂ ಪುನೀತ್ ಇಷ್ಟಪಡುತ್ತಿದ್ದ ತಿಂಡಿ, ತಿನಿಸುಗಳು 22 ಹಾಗೂ 23ರಂದು ರೆಡಿಯಾಗಲಿದೆ. ಜನರು ಹಣ ಕೊಟ್ಟು ತಮ್ಮಿಷ್ಟದ ಹಾಗೂ ಪುನೀತ್ ಇಷ್ಟದ ಆಹಾರಗಳನ್ನು ಸವಿಯಬಹುದಾಗಿದೆ.
