• March 14, 2026

ಗುಜರಾತ್ ನ ಖ್ಯಾತ ಗಾಯಕಿ ಶವ ಕಾರಿನಲ್ಲಿ ಪತ್ತೆ: ಕೊಲೆ ಶಂಕೆ

ವಲ್ಸಾದ್: ಗುಜರಾತ್​ನ ಖ್ಯಾತ ಗಾಯಕಿ ವೈಶಾಲಿ ಬಲ್ಸಾರಾ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ವಲ್ಸಾದ್ ಜಿಲ್ಲೆಯ ಪಾರ್ ನದಿಯ ದಡದಲ್ಲಿ ಸಾಕಷ್ಟು ಸಮಯದಿಂದ ಕಾರು ನಿಂತಲ್ಲೇ ನಿಂತಿತ್ತು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಯಕಿ ಶವ ಸಿಕ್ಕಿದೆ. ಗಾಯಕಿ ವೈಶಾಲಿ ಬಲ್ಸಾರಾ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಗಾಯಕಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನದಿಯ ದಡದಲ್ಲಿ ಸಾಕಷ್ಟು ಸಮಯದಿಂದ ಕಾರು ನಿಂತಿದ್ದು ನೋಡಿದ ಸ್ಥಳೀಯರು ಮಾಲೀಕರಿಗಾಗಿ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ಯಾರೂ ಪತ್ತೆಯಾಗದ ಕಾರಣ ಅನುಮಾನಗೊಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಗಾಯಕಿ ವೈಶಾಲಿ ಅವರ ಮೃತದೇಹ ಪತ್ತೆಯಾಗಿದೆ. ಗಾಯಕ ಹಿತೇಶ್ ಬಲ್ಸಾರಾ ಅವರ ಪತಿಯಾಗಿರುವ ಮೃತ ಗಾಯಕಿ ವೈಶಾಲಿ ಬಲ್ಸಾರಾ ಗುಜರಾತ್ ನ ಖ್ಯಾತ ಹಿನ್ನೆಲೆ ಗಾಯಕಿಯಾಗಿ ಹೆಸರು ಮಾಡಿದ್ದಾರೆ. ಗಾಯಕಿ ಪತಿ ಹಿತೇಶ್ ಪತ್ನಿ ನಾಪತ್ತೆಯಾಗಿರುವ ಕುರಿತು ಶನಿವಾರ ರಾತ್ರಿ 2 ಗಂಟೆಗೆ ದೂರು ನೀಡಿದ್ದರು. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಗಾಯಕಿಯ ಮೃತದೇಹ ನದಿ ದಡದ ಬಳಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಗಾಯಕಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now