• March 18, 2026

ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣ: ಆರೋಪಿಗಾಗಿ ಬಲೆ ಬೀಸಿದ ಪೊಲೀಸರು

ಕಳೆದ ಮೂರು ದಿನಗಳ ಹಿಂದೆ ಹಿಂದಿಯ ಖ್ಯಾತ ಕಿರುತೆರೆ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲು ಖಿನ್ನತೆಯಿಂದ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ವೈಶಾಲಿ ಡೆತ್ ನೋಟ್ ನಲ್ಲಿ ಆಕೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಕುರಿತು ಬರೆದಿದ್ದಾರೆ. ನಟಿ ವೈಶಾಲಿ ಇಂದೋರ್ ನಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿದ್ದು ತನಿಖೆ ಕೈಗೊಂಡಿದ್ದರು. ಈ ವೇಳೆ ಮೃತದೇಹದ ಪಕ್ಕ ಸೂಸೈಟ್ ನೋಟ್ ಪತ್ತೆಯಾಗಿದ್ದು ಅದರಲ್ಲಿ ವೈಶಾಲಿ ಸಾವಿಗೆ ಕಾರಣ ತಿಳಿಸಿದ್ದಾರೆ. ವೈಶಾಲಿಗೆ ಈ ಹಿಂದೆ ಕೀನ್ಯಾದ ಡೆಂಟಲ್ ಡಾಕ್ಟರ್ ಜೊತೆ ಎಂಗೇಜ್ ಮೆಂಟ್ ಆಗಿತ್ತು. ಈ ವಿಷಯವನ್ನು ವೈಶಾಲಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಎಂಗೇಜ್ ಮೆಂಟ್ ಮುರಿದು ಬಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೋವನ್ನು ವೈಶಾಲಿ ಡಿಲೀಟ್ ಮಾಡಿದ್ದರು. ಇದೇ ಕಾರಣಕ್ಕೆ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ವೈಶಾಲಿ ಸಾವಿಗೆ ನೆರೆಮನೆಯ ಯುವಕನೇ ಕಾರಣ ಅನ್ನೋದನ್ನು ವೈಶಾಲಿ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.             ವೈಶಾಲಿಗೆ ತುಂಬಾ ದಿನಗಳಿಂದಲೂ ನೆರೆ ಮನೆಯ ವ್ಯಕ್ತಿಯೊಬ್ಬ ಬಹಳ ಕಿರುಕುಳ ನೀಡುತ್ತಿದ್ದನಂತೆ. ಆತ ದಿನವೂ ಕೊಡುತ್ತಿದ್ದ ಕಿರುಕುಳವೇ ತನ್ನನ್ನು ಸಾಯುವಂತೆ ಪ್ರೇರೇಪಿಸಿತು ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರಂತೆ. ತನ್ನ ಸಾವಿಗೆ ಕಾರಣ, ಅದೇ ನೆರೆಮನೆಯ ವ್ಯಕ್ತಿ ರಾಹುಲ್ ನವ್ಲಾನಿ ಎಂದು ವೈಶಾಲಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಸದ್ಯ ಪೊಲೀಸರು ಆತನಿಗೆ ತೀವ್ರ ಹುಡುಕಾಟ ನಡೆಸಿದ್ದಾರೆ. ಅತ್ತ ವೈಶಾಲಿ ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಇತ್ತ ರಾಹುಲ್ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now