• January 1, 2026

ಪ್ಯಾಲಿಯೋ ಡಯಟ್ ನಿಂದ ಖ್ಯಾತ ನಟ ಭರತ್ ಕಲ್ಯಾಣ್ ಪತ್ನಿ ನಿಧನ

ಪ್ಯಾಲಿಯೋ ಡಯಟ್ ನಿಂದ ಖ್ಯಾತ ನಟ ಭರತ್ ಕಲ್ಯಾಣ್ ಪತ್ನಿ ನಿಧನ ಕನ್ನಡದ ಹಿರಿಯನಟ ಕಲ್ಯಾಣ್ ಕುಮಾರ್ ಸೊಸೆ ನಟ ಭರತ್ ಕಲ್ಯಾಣ್ ಪತ್ನಿ ಪ್ರಿಯದರ್ಶಿನಿ ನಿಧನರಾಗಿದ್ದಾರೆ. ಪ್ರಿಯದರ್ಶಿನಿ ಸಾವಿಗೆ ಪ್ಯಾಲಿಯೋ ಡಯಟ್ ಕಾರಣ ಎಂದು ಹೇಳಲಾಗುತ್ತಿದೆ. ಪ್ಯಾಲಿಯೋ ಡಯಟ್ ಕಾರಣದಿಂದ ಕಳೆದ ಹಲವು ದಿನಗಳಿಂದ ಕೋಮಾದಲ್ಲಿದ್ದ ಪ್ರಿಯದರ್ಶಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಿಯದರ್ಶಿನಿ ಹೆಚ್ಚು ತೂಕವಿದ್ದ ಕಾರಣಕ್ಕೆ ಪ್ಯಾಲಿಯೋ ಡಯಟ್ ನಲ್ಲಿದ್ದರು ಎನ್ನಲಾಗುತ್ತಿದೆ. ಜೊತೆಗೆ ಮಧುಮೇಹದಿಂದಲೂ ಬಳಲುತ್ತಿದ್ದರು. ಪ್ಯಾಲಿಯೋ ಡಯಟ್ ಶುರುಮಾಡಿದ ಬಳಿಕ ಮಧುಮೇಹ ಏಕಾಏಕಿ ಏರಿಕೆ ಕಂಡಿದೆ. ಕೂಡಲೇ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪ್ರಿಯಾದರ್ಶಿನಿ ಕೋಮಾಗೆ ಹೋಗಿದ್ದರು. ಕಳೆದ ಹಲವು ದಿನಗಳಿಂದ ತೀವ್ರ ನಿಗಾಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಧನರಾಗಿದ್ದಾರೆ. ಕಳೆದ ಮೂರು ತಿಂಗಳುಗಳ ಹಿಂದೆ ಕೋಮಾಗೆ ತೆರಳಿದ್ದ ಪ್ರಿಯಾದರ್ಶಿನಿ ಅವರಿಗೆ ತೀವ್ರ ನಿಗಾಘಟಕದಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಭರತ್ ಹಾಗೂ ಪ್ರಿಯದರ್ಶಿನಿ ದಂಪತಿಗೆ ಓರ್ವ ಮಗ ಹಾಗೂ ಮಗಳು ಇದ್ದಾರೆ. ಏಕಾಏಕಿ ಪ್ರಿಯದರ್ಶಿನಿ ಅವರು ನಿಧನ ಹೊಂದಿರುವ ವಿಚಾರ ಎಲ್ಲರಿಗೂ ಶಾಕ್ ನೀಡಿದೆ. ಚೆನ್ನೈನಲ್ಲಿರುವ  ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now