• January 1, 2026

ರಚಿತಾ ರಾಮ್ ಎದೆಯಲ್ಲಿ ಮೋಸ ಇಲ್ಲ, ಇದೇ ಕಾರಣಕ್ಕೆ ಇಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದಾರೆ: ದುನಿಯಾ ವಿಜಯ್

ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಚಿತಾ ರಾಮ್ ಸಿನಿಮಾ ರಂಗದಲ್ಲಿ ಸಖತ್ ಬೇಡಿಕೆ ಕಾಯ್ದುಕೊಂಡಿದ್ದಾರೆ.ಸಾಕಷ್ಟು ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಚಿತ್ರದ ಪ್ರೀ ರಿಲೀಸ್ ಈವೆಂಟ್ ಆಯೋಜಿಸಿದ್ದು ನಟ ದುನಿಯಾ ವಿಜಯ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  ಈ ವೇಳೆ ರಚ್ಚು ಬಗ್ಗೆ ವಿಜಿ ಮೆಚ್ಚುಗೆ ಮಾತನಾಡಿದ್ದಾರೆ. ರಚಿತಾ ರಾಮ್​ ಬಡಬಡ ಅಂತ ಮಾತಾಡುತ್ತಾರೆ. ಅವರ ಎದೆಯಲ್ಲಿ ಮೋಸ ಇಲ್ಲ. ಅದಕ್ಕಾಗಿಯೇ ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಸುಮಾರು ವರ್ಷ ಉಳಿದುಕೊಳ್ಳುತ್ತಾರೆ. ಅವರನ್ನು ನಾನು ತುಂಬ ಹತ್ತಿರದಿಂದ ನೋಡಿದ್ದೇನೆ. ಅವರ ಬಗ್ಗೆ ನನಗೆ ತುಂಬ ಗೌರವ ಇದೆ’ ಎಂದು ದುನಿಯಾ ವಿಜಯ್ ರಚಿತಾ ರಾಮ್ ರನ್ನು ಕೊಂಡಾಡಿದ್ದಾರೆ. ತಮ್ಮನ್ನು ದುನಿಯಾ ವಿಜಯ್ ಹೊಗಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಕುಳಿತಿದ್ದ ರಚಿತಾ ರಾಮ್ ಎದ್ದು ನಿಂತ ಕೈಮುಗಿದು ನಮಸ್ಕಾರ ಮಾಡಿದ್ದಾರೆ. ಇನ್ನೂ ಡಾಲಿ ಧನಂಜಯ್ ಕೂಡ ರಚಿತಾ ಬಗ್ಗೆ ಮಾತನಾಡಿದ್ದಾರೆ. ಡಾಲಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಆರಂಭದ ದಿನಗಳಲ್ಲಿ ರಚಿತಾ ರಾಮ್ ರನ್ನು ನೋಡಲು ಅವರ ಮನೆ ಮುಂದೆ ಸುತ್ತುತ್ತಿದ್ದೆ ಎಂದು ಧನಂಜಯ್ ಹೇಳಿದ್ದಾರೆ. ಇದೇ ಮೊದಲ ಭಾರಿಗೆ ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗಾಗ್ಲೆ ಮಾನ್ಸೂನ್ ರಾಗ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಸಖತ್ ಸದ್ದು ಮಾಡುತ್ತಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ. ಡಾಲಿ ಧನಂಜಯ್​, ರಚಿತಾ ರಾಮ್​ ಜೊತೆಗೆ ಯಶಾ ಶಿವಕುಮಾರ್​, ಅಚ್ಯುತ್​ ಕುಮಾರ್​, ಸುಹಾನಿಸಿ ಮಣಿರತ್ನಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರವೀಂದ್ರನಾಥ್​ ನಿರ್ದೇಶನ ಮಾಡಿದ್ದು, ವಿಖ್ಯಾತ್​ ಬಂಡವಾಳ ಹೂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now