• January 1, 2026

‘ಅದನ್ನು ಮರೆತು ಬಿಡಿ’ ಎಂದು ಜನ ಗಣ ಮನ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ

ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದರಿಂದ ನಟ ವಿಜಯ್ ದೇವರಕೊಂಡ ಸಾಕಷ್ಟು ಅಸಮಧಾನ ಗೊಂಡಿದ್ದು ಸಾರ್ವಜನಿಕರವಾಗಿ ಕಾಣಿಸಿಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಕಲೆಕ್ಷನ್ ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ವಿಜಯ್ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಸೆಟ್ಟೇರಬೇಕಿದ್ದು ಮತ್ತೊಂದು ಸಿನಿಮಾ ಆರಂಭದಲ್ಲಿಯೇ ಅಂತ್ಯಕಂಡಿದೆ. ಲೈಗರ್ ಸಿನಿಮಾ ಮುಗಿದ ತಕ್ಷಣವೇ ಜನ ಗಣ ಮನ ಚಿತ್ರ ಆರಂಭವಾಗಬೇಕಿತ್ತು. ಲೈಗರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿಯೇ ಜನ ಗಣ ಮನ ಚಿತ್ರದ ಅದ್ದೂರಿ ಮುಹೂರ್ತ ಆಚರಿಸಲಾಗಿತ್ತು. ಜೊತೆಗೆ ಇದುವರೆಗೂ ಸುಮಾರು 8 ಕೋಟಿ ಖರ್ಚು ಮಾಡಿ ಕೆಲವೊಂದು ದೃಶ್ಯಗಳನ್ನು ಶೂಟ್ ಮಾಡಲಾಗಿತ್ತು. ಆದರೆ ಇದೀಗ ಸಿನಿಮಾ ಆರಂಭವಾಗುವುದೇ ಅನುಮಾನವಾಗಿದೆ. ಅದಕ್ಕೆ ತಕ್ಕಂತೆ ನಟ ವಿಜಯ್ ದೇವರಕೊಂಡ ನೀಡದ ಹೇಳಿಕೆ ಮತ್ತಷ್ಟು ಪುಷ್ಠ ನೀಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸೈಮಾ 2022 ಕಾರ್ಯಕ್ರಮಕ್ಕೆ ನಟ ವಿಜಯ್ ದೇವರಕೊಂಡ ಆಗಮಿಸಿದ್ದಾರೆ. ಈ ವೇಳೆ ಪತ್ರಕರ್ತರು ಜನ ಗಣ ಮನ ಸಿನಿಮಾದ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವಿಜಯ್ ದೇವರಕೊಂಡ ಆ ವಿಷಯವನ್ನು ಮರೆತುಬಿಡಿ. ಇಲ್ಲಿಗೆ ಬಂದಿರುವುದು ಪ್ರಶಸ್ತಿ ಸಮಾರಂಭಕ್ಕೆ. ಈ ಸಮಯವನ್ನು ಎಂಜಾಯ್ ಮಾಡೋಣ ಎಂದು ಹೇಳಿದ್ದಾರೆ. ಅಲ್ಲಿಗೆ ಜನ ಗಣ ಮನ ಸಿನಿಮಾ ಆರಂಭವಾಗೋದು ಅನುಮಾನವೇ ಆಗಿದೆ. ಒಟ್ನಲ್ಲಿ ಲೈಗರ್ ಸಿನಿಮಾದ ಸೋಲಿನಿಂದ ಜನ ಗಣ ಮನ ಆರಂಭದಲ್ಲೇ ಅಂತ್ಯ ಕಂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now