ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಸೂರ್ಯ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್
ಸೆಪ್ಟೆಂಬರ್ ಕೊನೆ ವಾರ ಈ ಚಿತ್ರದ ಮುಹೂರ್ತ ನೆರವೇರಲಿದ್ದು, ಅಕ್ಟೋಬರ್ ಮೊದಲ ವಾರದಿಂದ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಹಿರಿಯ ನಟಿ ಶೃತಿ, `ಆರ್ಮುಗಂ’ ರವಿಶಂಕರ್, ಪ್ರಮೋದ್ ಶೆಟ್ಟಿ ಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೂ ಸಾಕಷ್ಟು ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ.
ನಂದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಸವರಾಜ್ ಬೆಣ್ಣಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ರವಿ ಬೆಣ್ಣಿ ಹಾಗೂ ಸಂತೋಷ್ ಕುರ್ಬೇಟ್ ಸಹ ನಿರ್ಮಾಪಕರು. ಕೆಜಿಎಫ್ ಭುವನ್ ಗೌಡ ಜೊತೆ ಕೆಲಸ ಮಾಡಿದ ಮನುರಾಜ್ ಈ ಚಿತ್ರದ ಛಾಯಾಗ್ರಾಹಕ. ಯುವನ್ ಶಂಕರ್ ರಾಜಾ ಜೊತೆ ಅನುಭವ ಹೊಂದಿರುವ ಶ್ರೀಶಾಸ್ತ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಮಣಿಕಂಠ.ಕೆ.ವಿ ಸಂಭಾಷಣೆ ಬರೆಯುತ್ತಿದ್ದಾರೆ.
