• March 14, 2026

ರಚಿತಾ ರಾಮ್ ಬಗ್ಗೆ ಕ್ರಾಂತಿ ಪ್ರೆಸ್ ಮೀಟ್ ನಲ್ಲಿ ದರ್ಶನ್ ಏನ್ ಹೇಳಿದ್ರು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರಕ್ಕಾಗಿ ಕಾದು ಕೂತಿರೋ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈಗಾಗ್ಲೆ ಚಿತ್ರದ ಕೆಲಸಗಳು ಆಲ್ ಮೋಸ್ಟ್ ಕಂಪ್ಲೀಟ್ ಆಗಿದ್ದು ಥಿಯೇಟರ್ ನಲ್ಲಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. 2023 ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಕ್ರಾಂತಿ ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ದರ್ಶನ್ ನಟನೆಯ ಯಜಮಾನ ಚಿತ್ರ ನಿರ್ದೇಶಿಸಿದ್ದ ಹರಿಕೃಷ್ಣ ಇದೀಗ ಕ್ರಾಂತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ತೆರೆಕಂಡಿದ್ದ ಯಜಮಾನ ಸಿನಿಮಾ ಸೂಪರ್ ಹಿಟ್ ಆಗಿದ್ದು ಇದೀಗ ಕ್ರಾಂತಿ ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಕ್ರಿಯೇಟ್ ಆಗಿದೆ. ಕ್ರಾಂತಿ ಚಿತ್ರದ ಬಗ್ಗೆ ಮಾತನಾಡಿದ ದರ್ಶನ್, ‘ಯಜಮಾನ’ ಸಿನಿಮಾ ರೈತರಲ್ಲಿ ಒಂದು ಚಿಕ್ಕ ಬದಲಾವಣೆಗೆ ಕಾರಣವಾಯಿತು. ಹಾಗೇ ‘ಕ್ರಾಂತಿ’ ಸಿನಿಮಾದಿಂದ ಶಿಕ್ಷಣದಲ್ಲಿ  ಬದಲಾವಣೆ ಆಗುವ ನಂಬಿಕೆಯಿದೆ. ಎಷ್ಟೋ ದೊಡ್ಡ ಸಾಧಕರು ಸರ್ಕಾರಿ ಶಾಲೆಗಳಲ್ಲಿ ಓದಿ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಆದರೆ, ಈಗ ಕಾಲ ಬದಲಾಗಿದೆ. ಹಾಗಾಗಿ ‘ಕ್ರಾಂತಿ’ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲರೂ ಕುಟುಂಬ ಸಮೇತ ಯಾವುದೇ ಮುಜುಗರವಿಲ್ಲದೇ ಕುಳಿತು ನೋಡಬಹುದಾದ ಸಿನಿಮಾವಿದು” ಎಂದರು. ಈ ಹಿಂದೆ ದರ್ಶನ್ ಜೊತೆ ಬುಲ್ ಬುಲ್, ಅಂಬರೀಶ ಚಿತ್ರದಲ್ಲಿ ಜೋಡಿಯಾಗಿದ್ದ ನಟಿ ರಚಿತಾ ರಾಮ್ ಕ್ರಾಂತಿ ಚಿತ್ರದಲ್ಲಿ ದರ್ಶ ನ್ ಗೆ ಜೊತೆಯಾಗಿದ್ದಾರೆ. ರಚಿತಾ ರಾಮ್‌  ಬಗ್ಗೆ ಮಾತನಾಡಿದ ದರ್ಶನ್, ಒಬ್ಬ ನಾಯಕಿ ನಟಿಯಾಗಿ ಹತ್ತು ವರ್ಷ ಸಿನಿಮಾ ರಂಗದಲ್ಲಿ ಉಳಿಯುವುದು ಮತ್ತು ಬೇಡಿಕೆ ಹೆಚ್ಚಿಸಿಕೊಳ್ಳುವುದು ತುಂಬಾ ಕಷ್ಟ. ಆದರೆ. ರಚಿತಾ ರಾಮ್ ಸಿನಿಮಾರಂಗದಲ್ಲಿ ಬೆಳೆಯಲು ಅವರ ಶ್ರಮವೇ ಕಾರಣ ಎಂದರು. ಚಿತ್ರದ ಬಗ್ಗೆ ಮಾತನಾಡಿದ ನಟಿ ರಚಿತಾ ರಾಮ್‌, “ದರ್ಶನ್ ಸರ್ ಅವರ ಅಭಿಮಾನಿಗಳೇ ಸಿನಿಮಾಗೆ  ಪ್ರಚಾರ ನೀಡುತ್ತಿರುವುದು ನೋಡಿ ತುಂಬಾ ಖುಷಿ ಆಗಿದೆ. ಅದಕ್ಕಾಗಿ, ದರ್ಶನ್  ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆ. ದರ್ಶನ್‌ ಜೊತೆಗೆ ಐದಾರು ವರ್ಷಗಳ ನಂತರ ಕೆಲಸ ಮಾಡಿದ್ದೇನೆ. ದರ್ಶನ್ ಜೊತೆಗಿನ ಹಿಂದಿನ ಅಭಿನಯ ಮತ್ತು ಈಗಿನ ಅನುಭವದಲ್ಲಿ ಹೆಚ್ಚು ವ್ಯತ್ಯಾಸವಿರಲಿಲ್ಲ. ಎಲ್ಲವೂ ಮೊದಲಿನ ಹಾಗೇ ಇತ್ತು. ಮೊದಲ ಬಾರಿಗೆ ‘ಮೀಡಿಯಾ ಹೌಸ್ ಸ್ಟುಡಿಯೋ’ ತಂಡ ಮತ್ತು ವಿ ಹರಿಕೃಷ್ಣ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದೀನಿ. ನನಗೆ ಈ ಸಿನಿಮಾದಲ್ಲಿ ಉತ್ತಮ ಪಾತ್ರ ನೀಡಿದ್ದಾರೆ. ನನ್ನದೂ ಸೇರಿದಂತೆ ಎಲ್ಲಾ ಪಾತ್ರಗಳು ಚೆನ್ನಾಗಿವೆ. ಹಾಡುಗಳು ಸುಂದರವಾಗಿ ಮೂಡಿ ಬಂದಿವೆ ಎಂದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now