• January 1, 2026

ತನ್ನನ್ನೇ ತಾನು ಮದುವೆಯಾದ ಕಿರುತೆರೆ ನಟಿ

ಕಿರುತೆರೆಯಲ್ಲಿ ಸಾಕಷ್ಟು ಶೋ ಮತ್ತು ಸೀರಿಯಲ್ ಮೂಲಕ ಸದ್ದು ಮಾಡಿರುವ ಕಾನಿಷ್ಕಾ ಸೋನಿ ಕೂಡ ಇದೇ ರೀತಿಯ ಮದುವೆಯಿಂದ ಸಿಕ್ಕಾಪಟ್ಟೆ ಆಗ್ತಿದ್ದಾರೆ. ತನ್ನನ್ನು ತಾನೇ ಮದುವೆಯಾಗಿರುವ ನಟಿ ಕಾನಿಷ್ಕಾ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. `ದಿಯಾ ಔರ್ ಬಾತಿ ಹಮ್’ ಧಾರವಾಹಿ ಖ್ಯಾತಿಯ ನಟಿ ಕಾನಿಷ್ಕಾ ಸೋನಿ ಇತ್ತೀಚಿನ ದಿನಗಳಲ್ಲಿ ತಮ್ಮ ಖಾಸಗಿ ವಿಷಯಗಳಿಗೆ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಆಗಾಗ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕಾನಿಷ್ಕ ಫೋಸ್ಟ್ ನೀಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಾನಿಷ್ಕಾ ಫೋಟೋದಲ್ಲಿ ಹಣೆಗೆ ಸಿಂಧೂರವಿಟ್ಟು ಮತ್ತು ಕತ್ತಿಗೆ ಮಂಗಳಸೂತ್ರವನ್ನು ಧರಿಸಿದ್ದಾರೆ. ಕಾನಿಷ್ಕಾ ತನ್ನ ಇನ್ಸ್ಟಾಗ್ರಾಂ ಮೂಲಕ ತಾನು ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ. ಕಾನಿಷ್ಕಾ ತಮ್ಮ ಪೋಸ್ಟ್‌ನಲ್ಲಿ, ನನ್ನನ್ನೇ ಮದುವೆಯಾಗಿದ್ದೇನೆ ಏಕೆಂದರೆ ನಾನು ನನ್ನ ಎಲ್ಲಾ ಕನಸುಗಳನ್ನು ಪೂರೈಸಿದ್ದೇನೆ ಮತ್ತು ನನ್ನನ್ನು ಪ್ರೀತಿಸುವ ಏಕೈಕ ವ್ಯಕ್ತಿ ನಾನೇ ಆಗಿದ್ದೇನೆ ಎಂದಿದ್ದಾರೆ. ಒಟ್ನಲ್ಲಿ ಕಾನಿಷ್ಕ ತನ್ನನ್ನೇ ತಾನು ಮದುವೆಯಾಗಿರೋದು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now