• March 16, 2026

ಪತಿ ಅಮ್ಜದ್ ಮನೆಯಲ್ಲಿ ರಂಪಾಟ ಮಾಡಿದ ದಿವ್ಯಾ ಶ್ರೀಧರ್: ವಿಡಿಯೋ ವೈರಲ್ ಮಾಡಿದ ಪತಿ

ಆಕಾಶ ದ್ವೀಪ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ದಿವ್ಯಾ ಶ್ರೀಧರ್ ವೈವಾಹಿಕ ಜೀವನ ಬೀದಿಗೆ ಬಿದ್ದಿದೆ. ಪತಿ ಅಮ್ಜದ್ ಖಾನ್ ವಿರುದ್ಧ ದಿವ್ಯಾ ಶ್ರೀಧರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಬ್ಬರು ಗಂಡ, ಹೆಂಡತಿಯರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದು ಇದೀಗ ಪತಿಯ ಜೊತೆಗೆ ದಿವ್ಯಾ ಶ್ರೀಧರ್ ಗಲಾಟೆ ಮಾಡುತ್ತಿರುವ ವಿಡಿಯೋ ನಟ ಅಮ್ಜದ್ ಖಾನ್ ವೈರಲ್ ಮಾಡಿದ್ದಾರೆ. ಸಹನಟ ಅಮ್ಜದ್ ಖಾನ್ ನನ್ನು ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಶ್ರೀಧರ್ ಪತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪತಿಯಿಂದ ಹಲ್ಲೆಗೊಳಗಾದ ಮೂರು ತಿಂಗಳ ಗರ್ಭೀಣಿ ದಿವ್ಯಾ ಶ್ರೀಧರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆದ ಬಳಿಕ ನೇರವಾಗಿ ಅಮ್ಜದ್ ಖಾನ್ ಮನೆಗೆ ಹೋಗಿ ಪತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ದಿವ್ಯಾ ಶ್ರೀಧರ್‌ ಹಾಗೂ ನಟ ಅಮ್ಜದ್‌ ಖಾನ್‌ ಪ್ರಕರಣದಲ್ಲಿ ಕರ್ನಾಟಕ ಮಹಿಳಾ ಆಯೋಗದ ಅಧಿಕಾರಿಗಳು ಪ್ರವೇಶ ಮಾಡಿದ್ದಾರೆ. ದಿವ್ಯಾ ಶ್ರೀಧರ್ ಕರ್ನಾಟಕ ಮೂಲದ ನಟಿಯಾಗಿರುವುದರಿಂದ ಮಹಿಳಾ ಆಯೋಗ ನಟಿಯ ಪರ ತಮಿಳು ನಾಡು ಸರ್ಕಾರಕ್ಕೆ ಮನವಿ ಮಾಡಿದೆ. ಪತಿಯಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಒತ್ತಾಯಿಸಿದ್ದರು. ಡಿಸ್ಜಾರ್ಜ್ ಆದ ಬಳಿಕ ನೇರವಾಗಿ ಪತಿಯ ಮನೆಗೆ ಹೋದ ದಿವ್ಯಾ ಶ್ರೀಧರ್ ಯಾಕೆ ನನಗೆ ಮೋಸ ಮಾಡಿದೆ ಎಂದು ಅಮ್ಜದ್ ಖಾನ್ ವಿರುದ್ಧಿ ತಿರುಗಿ ಬಿದ್ದಿದ್ದಾರೆ. ಈ ವೇಳೆ ನೀನೆ ನನಗೆ ಮೋಸ ಮಾಡಿದೆ. ನೀನೆ ನನ್ನನ್ನು ಪ್ರೀತಿಸಿ ಮದುವೆಯಾದ ಎಂದು ಆರೋಪಿಸಿದ್ದಾರೆ. ಪತಿ, ಪತ್ನಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2017ರಿಂದಲೂ ಲೀವಿಂಗ್ ಟುಗೇದರ್ ನಲ್ಲಿರುವ ದಿವ್ಯಾ ಶ್ರೀಧರ್ ಮುಸ್ಲಿಂ ಧರ್ಮಕ್ಕೆ ಮಂತಾತರ ಆಗಿ ಬಳಿಕ ಅಮ್ಜದ್ ಖಾನ್ ರನ್ನು ವಿವಾಹವಾಗಿದ್ದರು. ಸದ್ಯ ದಿವ್ಯಾ ಮೂರು ತಿಂಗಳ ಮಗುವಾಗಿದ್ದು ಮದುವೆಯಾದ ಮೂರು ನಾಲ್ಕು ತಿಂಗಳೊಳಗೆ ಪತಿ, ಪತ್ನಿ ಮಧ್ಯೆ ಮನಸ್ತಾಪ ಉಂಟಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now