• June 19, 2026

ಮತ್ತೋರ್ವ ನಟನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ ನಿರ್ದೇಶಕ ಶಶಾಂಕ್

ಸಾಮಾನ್ಯವಾಗಿ ಖ್ಯಾತ ನಿರ್ದೇಶಕರು ಸ್ಟಾರ್ ನಟರ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳೋದೆ ಹೆಚ್ಚು. ಆದ್ರೆ ಸ್ಟಾರ್ ನಟರನ್ನು ಹುಟ್ಟುಹಾಕೋದ್ರಲ್ಲಿ ಖ್ಯಾತ ನಿರ್ದೇಶಕ ಶಶಾಂತ್ ಮೊದಲು. ಇದೀಗ ಸ್ಯಾಂಡಲ್ ವುಡ್ ಗೆ ಹೊಸ ನಾಯಕನನ್ನು ಪರಿಚಯಿಸುವ ಮೂಲಕ ಸ್ಟಾರ್ ನಟನನ್ನು ಗಾಂಧಿನಗರಕ್ಕೆ ನೀಡ್ತಿದ್ದಾರೆ. ಶಶಾಂಕ್ ನಿರ್ದೇಶನ ಮಾಡಿದ್ದ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಕಲಾವಿದರು ಇಂದು ಸ್ಟಾರ್ ಕಲಾವಿದರಾಗಿ ಸದ್ದು ಮಾಡ್ತಿದ್ದಾರೆ. ಅಲ್ಲದೆ ನಟ ಅಜಯ್ ರಾವ್ ಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದು ಇದೇ ಶಶಾಂಕ್. ಇದೀಗ ಶಶಾಂಕ್ ಲವ್ 360 ಸಿನಿಮಾದ ಮೂಲಕ ಮತ್ತೋರ್ವ ನಾಯಕನನ್ನು ಗಾಂಧಿನಗರಕ್ಕೆ ಪರಿಚಯಿಸುತ್ತಿದ್ದಾರೆ. ಲವ್ ಸ್ಟೋರಿಗಳನ್ನು ಪ್ರೇಕ್ಷಕರ ಮನ ಮುಟ್ಟಿಸುವುದರಲ್ಲಿ ಶಶಾಂಕ್ ಸಿದ್ದಹಸ್ತರು. ಶಶಾಂಕ್ ನಿರ್ದೇಶನದ ಮಾಡಿರೋ ಪ್ರತಿಯೊಂದು ಸಿನಿಮಾವೂ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿವೆ. ಇದೇ ಕಾರಣಕ್ಕೆ ಶಶಾಂಕ್ ನಿರ್ದೇಶನದ ಲವ್ 360 ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಲವ್ 360 ಚಿತ್ರದ ನಟ ಪ್ರವೀಣ್‌ ಮೂಲತಃ ಹೊಸಪೇಟೆಯವರು. ಈಗಾಗಲೇ ವೈದ್ಯಕೀಯ ಪದವಿ ಮುಗಿಸಿರುವ ಅವರು ಬಹಳ ವರ್ಷಗಳಿಂದ ನಟರಾಗಬೇಕು ಎಂಬ ಕನಸು ಕಂಡವರು. ವಿಶಾಖಪಟ್ಟಣದಲ್ಲಿ ನಟನಾ ತರಬೇತಿ, ಬೆಂಗಳೂರಿನ ಆದರ್ಶ ಇನ್‌ಸ್ಟಿಟ್ಯೂಟ್‌ನಲ್ಲಿ, ಜಿ ಅಕಾಡೆಮಿಯಲ್ಲಿ ಹೀಗೆ ಹಲವು ಕಡೆಗಳಲ್ಲಿ ತರಬೇತಿ ಪಡೆದುಕೊಂಡಿದ್ದು, ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಲವ್ 360 ಸಿನಿಮಾದ  ಟ್ರೈಲರ್ ಗಮನ ಸೆಳೆದಿದೆ. ಹಾಡುಗಳನ್ನು ಕೇಳುಗರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾಗಳ ಸಾಲಿನಲ್ಲಿ ಇರಲಿದೆ ಎನ್ನುವುದು ಸ್ಯಾಂಡಲ್ ವುಡ್ ಸಿನಿ ಪಂಡಿತರ ಲೆಕ್ಕಾಚಾರ. ಒಟ್ನಲ್ಲಿ ಶಶಾಂಕ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿಯಾಗುತ್ತಿದ್ದು ಚಿತ್ರದ ಮೇಲೆ ಸಾಕಷ್ಟು ಇದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now