• March 14, 2026

ಕಾಂತಾರ ಸಿನಿಮಾ ರಂಗಕ್ಕೆ ಅದ್ಭುತವಾದ ಪಾಠ ಹೇಳಿಕೊಟ್ಟಿದೆ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ಕೇಳಿ ಬರ್ತಿದೆ. ಕನ್ನಡದ ಜೊತೆಗೆ ಪರಭಾಷೆಯ ಮಂದಿಯೂ ರಿಷಬ್ ನಟನೆಗೆ ಹ್ಯಾಟ್ಸ್ ಆಫ್ ಅಂತಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಾಂತಾರವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿಗೆ ಧನ್ಯವಾದ ಹೇಳಿದ್ದಾರೆ. ಅಕ್ಟೋಬರ್ 30ರಂದು ತೆರೆಕಂಡ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದ ಜೊತೆಗೆ ತೆರೆಕಂಡ ಪೊನ್ನಿಯಲ್ ಸೆಲ್ವನ್ ಹಾಗೂ ಗಾಡ್ ಫಾದರ್ ಚಿತ್ರಗಳನ್ನು ಕಾಂತಾರ ಹಿಂದಿಕ್ಕಿದೆ. ಕನ್ನಡದಲ್ಲಿ ತೆರೆಕಂಡು ಪರಭಾಷೆಗೆ ಡಬ್ ಆಗಿ ಅಲ್ಲಿಯೂ ಕಾಂತಾರ ಕಮಾಲ್ ಮಾಡುತ್ತಿದೆ. ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ವರ್ಮಾ ಬಿಗ್‌ ಬಜೆಟ್‌ ಸಿನಿಮಾಗಳಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ರಿಷಬ್‌ ಥ್ಯಾಂಕ್ಸ್‌, ಎಲ್ಲರೂ ನಿಮಗೆ ಫೀಸ್‌ ಕಟ್ಟಬೇಕು ಅಂತ ಹೇಳಿದ್ದಾರೆ ಈ ಬಗ್ಗೆ ಟ್ವೀಟ್ ಮಾಡಿರುವ ಆರ್ ಜಿವಿ ಹೇ ರಿಷಬ್‌, ಸಿನಿಮಾ ರಂಗಕ್ಕೆ ಕಾಂತಾರ ಎಂಬ ಅದ್ಭುತ ಪಾಠವನ್ನು ಹೇಳಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು. ಚಿತ್ರರಂಗದ ಎಲ್ಲರೂ ನಿಮಗೆ ಬೋಧಾನಾ ಶುಲ್ಕ ಕಟ್ಟಬೇಕಾಗುತ್ತದೆ . ನಿಮ್ಮ ಸಿನಿಮಾ ಮೂಲಕ ಶಿವನು ಗುಳಿಗ ದೈವದಿಂದ ಹೇಗೆ ಎಚ್ಚರಗೊಳ್ಳುತ್ತಾನೋ ಹಾಗೆ ಎಲ್ಲಾ ದೊಡ್ಡ ಬಜೆಟ್‌ ಸಿನಿಮಾ ತಯಾರಕರು ನಡುರಾತ್ರಿ ಹಠಾತ್ತನೆ ಎಚ್ಚರಗೊಳ್ಳುತ್ತಿದ್ದಾರೆ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now