• June 4, 2026

ತಾಪ್ಸಿ ಸ್ತನದ ಬಗ್ಗೆ ಮಾತನಾಡಿ ನೆಟ್ಟಿಗೆರ ಕೆಂಗಣ್ಣಿಗೆ ಗುರಿಯಾದ ಅನುರಾಗ್ ಕಶ್ಯಪ್

ವಿವಾದಾತ್ಮಕ ಹೇಳಿಕೆ ನೀಡೋದ್ರಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸದಾ ಮುಂದೆ. ನಿತ್ಯ ಒಂದಲ್ಲ ಒಂದು ಹೇಳಿಕೆ ನೀಡಿ ಟ್ರೋಲ್ ಆಗೋದು ಅನುರಾಗ್ ಕಶ್ಯಪ್ ಗೆ ಹೊಸದೇನು ಅಲ್ಲ. ಇದೀಗ ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾವನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ. ದೋಬಾರಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಫುಲ್ ಬ್ಯುಸಿಯಾಗಿದ್ದಾರೆ. ಹಲವಾರು ಊರುಗಳನ್ನು ತಿರುಗಿ ಜನರಿಗೆ ಸಿನಿಮಾ ತಲುಪಿಸಲು ಅನುರಾಗ್ ಹಾಗೂ ತಾಪ್ಸಿ ಪಣತೊಟ್ಟಿದ್ದಾರೆ. ಪ್ರಚಾರದ ಕಾರ್ಯದಲ್ಲಿ ತೊಡಗಿಕೊಂಡಿರುವ ಅನುರಾಗ್ ಎಡವಟ್ಟು ಮಾಡಿಕೊಂಡಿದ್ದಾರೆ. ಸಂದರ್ಶಕರು ರಣವೀರ್ ಸಿಂಗ್ ಬೆತ್ತೆಲೆ ಫೋಟೋ ಬಗ್ಗೆ ಪ್ರಶ್ನೆ ಮಾಡಿದಾಗ, ಅದರ ಪರವಾಗಿ ಕಶ್ಯಪ್ ಮಾತನಾಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದಿದ್ದು ಇದನ್ನು ತಾಪ್ಸಿ ಒಪ್ಪಿಕೊಳ್ಳುವುದಿಲ್ಲ. ಈ ತಾಪ್ಸಿಗೆ ಹುಡುಗರನ್ನು ಕಂಡರೆ ಹೊಟ್ಟೆ ಉರಿ, ಈಕೆಯ ಸ್ತನಗಳಿಗಿಂತ ನನ್ನವು ದೊಡ್ಡದಿವೆ’ ಎಂದು ಕಾಮೆಂಟ್ ಮಾಡುತ್ತಾರೆ. ಈ ಮಾತನ್ನು ಕೇಳಿ ತಾಪ್ಸಿ ಶಾಕ್ ಆಗಿದ್ದಾರೆ. ಸದ್ಯ ಅನುರಾಗ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಕಶ್ಯಪ್ ಹೇಳಿದ್ದು ಸರಿಯಾಗಿದೆ ಎಂದರೆ ಸಾಕಷ್ಟು ಮಂದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತು ಕೆಲವರು ಇದೆಲ್ಲಾ ಸಿನಿಮಾ ಪ್ರಚಾರದ ಗಿಮಿಕ್ ಅನ್ನುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now