• December 22, 2025

ಬೆಳೆಹಾನಿಗೆ ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ : ಸಚಿವ ಕೃಷ್ಣ ಬೈರೇಗೌಡ

ಬೆಳೆಹಾನಿಗೆ ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಆಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 487 ಜಾನುವಾರುಗಳು ಪ್ರಕೃತಿ ವಿಕೋಪಕ್ಕೆ ಬಲಿಯಾಗಿವೆ.

ಪರಿಹಾರ ನೀಡುವ ಕಾರ್ಯ ಆಗಲಿದೆ.

1,400 ಮನೆಗಳಿಗೆ ಮಳೆಯಿಂದ ಭಾಗಶಃ ಹಾನಿ ಆಗಿದೆ. ಬೆಳೆ 20,160 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಆಗಿದೆ. ಬೆಳೆಹಾನಿಗೆ ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಆಗಲಿದೆ. ಪರಿಹಾರ ಪೋರ್ಟಲ್ ಆರಂಭಿಸಲು ಸೂಚಿಸಿದ್ದೇವೆ. ಅಧಿಕಾರಿಗಳಿಗೂ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ. ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಪರಿಹಾರದ ಮೊತ್ತ ನಿಗದಿ ಆಗಲಿದೆ ಎಂದು ತಿಳಿಸಿದರು. 538 ಕೋಟಿ ರೂ. ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ. ಕೊರತೆ ಇರುವಲ್ಲಿ ಒಂದೆರಡು ದಿನದಲ್ಲಿ ತಲುಪಿಸುತ್ತೇವೆ. ಇದು ತಕ್ಷಣದ ಕೆಲಸ. ಉಳಿದಂತೆ ಕಳೆದ ಎರಡು ವರ್ಷದಲ್ಲಿ ಅತಿಯಾದ ಮಳೆಯಿಂದ ದೊಡ್ಡ ಹಾನಿ ಆಗಿತ್ತು. ಈ ಸಾರಿ ಮುನ್ನೆಚ್ಚರಿಕೆ ಕೈಗೊಳ್ಳಲಿದ್ದೇವೆ. ಬೆಂಗಳೂರು, ಕೊಡಗು, ಮಂಗಳೂರು, ಬೆಳಗಾವಿ, ರಾಯಚೂರು ಜಿಲ್ಲೆಯಲ್ಲಿ ರಕ್ಷಣಾ ತಂಡ ನಿಯೋಜಿತವಾಗಲಿದೆ ಎಂದು ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now