ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬುಲೆಟ್ ಫ್ರೂವ್ ಕಾರು ಖರೀದಿಸಿದ ಸಲ್ಮಾನ್ ಖಾನ್
ಜೀವ ಬೆದರಿಕೆ ಕರೆಗಳು ಬರುತ್ತಿರೋ ಹಿನ್ನೆಲೆಯಲ್ಲಿ ಸಲ್ಮಾನ್ ಇತ್ತೀಚೆಗೆ ಮುಂಬೈ ಪೊಲೀಸ್ ಕಮಿಷನರ್ ರನ್ನ ಭೇಟಿ ಮಾಡಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಸಲ್ಮಾನ್ ಖಾನ್ ಮನೆಗೆ ಬಿಗಿ ಭದ್ರತೆಯನ್ನು ಗೃಹ ಇಲಾಖೆ ನೀಡಿದೆ. ಜೊತೆಗೆ ಹೆಚ್ಚು ಜನಸಂದಣಿ ಇರುವ ಸ್ಥಳ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಸಲ್ಮಾನ್ ಗೆ ಸೂಚನೆ ನೀಡಿದ್ದಾರೆ. ಆದರೆ ಸಲ್ಮಾನ್ ಖಾನ್ ಶೂಟಿಂಗ್ ಗೆ ತೆರೆಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಬುಲೆಟ್ ಫ್ರೂವ್ ಕಾರು ಖರೀದಿ ಮಾಡಿದ್ದಾರೆ.
ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಪೊಲೀಸರ ಸಲಹೆಯ ಮೇರೆಗೆ ಸಲ್ಮಾನ್ ಖಾನ್ ಬುಲೆಟ್ ಫ್ರೂವ್ ಕಾರು ಖರೀದಿ ಮಾಡಿದ್ದಾರೆ. ಇನ್ಮುಂದೆ ಸಲ್ಮಾನ್ ಇದೇ ಕಾರಿನಲ್ಲಿ ಓಡಾಡಲಿದ್ದಾರೆ.
