ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ನೀಡಿದ ರಾಕಿಂಗ್ ಸ್ಟಾರ್ ಯಶ್?
ಯಶ್ ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ನೀಡಿದ್ದರೆ ಇದು ಇಷ್ಟೊತ್ತಿಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಹೀಗಾಗಿ ಇದು ಕೇವಲ ಗಾಳಿ ಸುದ್ದಿ ಅನ್ನೋದು ಗೊತ್ತಾಗಿದೆ. ಇತ್ತೀಚೆಗೆ ಸಂತೋಷ್ ತ್ರಿಪಾಠಿ ಅನ್ನುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಯಶ್ ದೇವಸ್ಥಾನದಲ್ಲಿ ಇರುವ ಫೋಟೊವೊಂದನ್ನು ಶೇರ್ ಮಾಡಿದ್ದರು. ಜೊತೆಗೆ “ದಕ್ಷಿಣದ ಸ್ಟಾರ್ ನಟ ಯಶ್ ಕುಮಾರ್ ಅಯೋಧ್ಯೆ ರಾಮಮಂದಿರದ ರಾಮ್ಲಲ್ಲಾಗೆ ಭೇಟಿ ನೀಡಿದ್ದರು. ಈ ವೇಳೆ ಮಂದಿರ ನಿರ್ಮಾಣಕ್ಕೆ 50 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ” ಎಂದು ಬರೆದುಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಅಂದಹಾಗೆ ಅದು ಕೆಜಿಎಫ್ 2 ಸಿನಿಮಾದ ರಿಲೀಸ್ ಟೈಮಲ್ಲಿ ಯಶ್ ತಿರುಪತಿಗೆ ಭೇಟಿ ನೀಡಿದ ಫೋಟೋವಾಗಿದೆ. ಇದೇ ಫೋಟೋವನ್ನು ಬಳಿಸಿಕೊಂಡು ಸಂತೋಷ್ ತ್ರಿಪಾಠಿ ಗಾಳಿ ಸುದ್ದಿ ಹಬ್ಬಿಸಿದ್ದರು. ಇನ್ನೂ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ನರ್ತನ್ ನಿರ್ದೇಶನದ ಸಿನಿಮಾ ತಡವಾಗುತ್ತಿದೆ. ಹೀಗಾಗಿ ಯಶ್ ಮುಂದಿನ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳುತ್ತಾರೆ? ಕತೆ ಏನು? ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
