ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಶ್ಮೀರದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದ ಇಮ್ರಾನ್ ಹಶ್ಮಿ: ಸುಳ್ಳು ಹೇಳುತ್ತಿದ್ದಾರೆ ಎಂದ ನೆಟ್ಟಿಗರು
ಇಮ್ರಾನ್ ಹಶ್ಮಿ ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಿದ್ದಾರೆ. ಕಳೆದ ಮೂರು ದಿನಗಳಿಂದ ಕಾಶ್ಮೀರದಲ್ಲಿ ಕಾಶ್ಮೀರದಲ್ಲಿ ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಮ್ರಾನ್ ಹಶ್ಮಿ ಮೇಲೆ ಏಕಾ ಏಕಿ ದಾಳಿ ನಡೆದಿದ್ದು ಘಟನೆಯಿಂದ ಇಮ್ರಾನ್ ಅಘಾತಗೊಂಡಿದ್ದಾರೆ ಎಂದು ಹೇಳಲಾಗಿತ್ತು.
ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ಕಾಶ್ಮೀರದ ಪಹಲ್ಗಾಂನಲ್ಲಿ ನಡೆಯುತ್ತಿದೆ. ಎರಡನೇ ದಿನದ ಶೂಟಿಂಗ್ ಮುಗಿಸಿಕೊಂಡ ಇಮ್ರಾನ್ ಕಾಶ್ಮೀರದ ಪಹಲ್ಗಾಂ ಮಾರುಕಟ್ಟೆಗೆ ತೆರಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಇಮ್ರಾನ್ ಮೇಲೇ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಸಡನ್ ಆಗಿ ನಡೆದ ಈ ಬೆಳವಣಿಗೆಯಿಂದ ಇಮ್ರಾನ್ ಹಶ್ಮಿ ಆಘಾತಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಸ್ವತಃ ಇಮ್ರಾನ್ ಹಶ್ಮಿ ಇದೆಲ್ಲವು ಸುಳ್ಳು ಎಂದಿದ್ದಾರೆ.
