• March 15, 2026

ಮಗಳ ಆಗಮನದ ಬಳಿಕ ಹೆಣ್ಣು ಮಕ್ಕಳ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಿದೆ: ನಟ ಧ್ರುವ ಸರ್ಜಾ

ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಈಗಾಗ್ಲೆ ರಾಯನ್ ಸರ್ಜಾ ಆಗಮನದಿಂದ ಖುಷಿಯಲ್ಲಿರೋ ಕುಟುಂಬಕ್ಕೆ ಇದೀಗ ಪುಟ್ಟ ಲಕ್ಷ್ಮಿಯ ಎಂಟ್ರಿ ಮತ್ತಷ್ಟು ಖುಷಿ ನೀಡಿದೆ. ಧ್ರುವ ಸರ್ಜಾ ಆಸೆಯಂತೆ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸರ್ಜಾ ಕುಟುಂಬ ಸಖತ್ ಖುಷಿಯಾಗಿದೆ. ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗಳಿಗೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಸಿನಿಮಾ ರಂಗದವರು ಶುಭ ಹಾರೈಸುತ್ತಿದ್ದಾರೆ. ಮಗಳ ಆಗಮನದ ಖುಷಿಯಲ್ಲಿರುವ ಧ್ರುವ ಸರ್ಜಾ ಮಾದ್ಯಮಗಳ ಮುಂದೆ ಖುಷಿ ಹಂಚಿಕೊಂಡಿದ್ದಾರೆ. ನನಗೆ ತುಂಬ ಖುಷಿ ಆಗಿದೆ. ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಸಹಜವಾಗಿಯೇ ಹುಡುಗಿಯರು ಎಂದರೆ ನನ್ನ ಮನದಲ್ಲಿ ಗೌರವ ಇತ್ತು. ಇಂದು ಎಲ್ಲ ಪ್ರಕ್ರಿಯೆಗಳನ್ನು ನೋಡಿದ ಮೇಲೆ ಆ ಮರ್ಯಾದೆ ಸ್ವಲ್ಪ ಜಾಸ್ತಿ ಆಯ್ತು’ ಎಂದರು. ‘ಎಲ್ಲರ ಜೀವನದಲ್ಲೂ ಏಳು-ಬೀಳು ಇದ್ದೇ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಇತ್ತು. ಸಾಕಷ್ಟು ದಂಪತಿಗಳಿಗೆ ಗರ್ಭಪಾತ ಆಗಿರುತ್ತದೆ. ಅದರ ಬಗ್ಗೆ ಕೆಲವರು ಹೇಳಿಕೊಳ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳಲ್ಲ. ಹೆಣ್ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ನಾವೇ ಉದಾಹರಣೆ. ಅದನ್ನೆಲ್ಲ ಈಗ ಮಾತನಾಡೋದು ಬೇಡ. ಸದ್ಯಕ್ಕೆ ನಾವು ಖುಷಿಯಾಗಿದ್ದೇವೆ. ವೈದ್ಯರಿಗೆ ಧನ್ಯವಾದ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ‘ಎಲ್ಲರ ಆಶೀರ್ವಾದದಿಂದ ನಮಗೆ ಮುದ್ದಾದ ಮಗು ಜನಿಸಿದೆ. ಇಡೀ ನಮ್ಮ ಕುಟುಂಬ ಖುಷಿಯಾಗಿದೆ. ಈ ಸಮಯದಲ್ಲಿ ನಾನು ನಮ್ಮ ಅಣ್ಣನನ್ನು ಮಿಸ್​ ಮಾಡಿಕೊಳ್ಳುತ್ತೇನೆ. ನಮ್ಮ ಅಜ್ಜಿಯನ್ನೂ ಮಿಸ್​ ಮಾಡಿಕೊಳ್ಳುತ್ತೇನೆ ಎಂದರು. ಮಗಳ ಆಗಮನದ ಖುಷಿಯಲ್ಲಿರುವ ಧ್ರುವ ಸರ್ಜಾ ಆಸ್ಪತ್ರೆಯ ಬಳಿ ಅಭಿಮಾನಿಗಳ ಸೆಲ್ಫಿಗೆ ಫೋಸ್ ಕೊಟ್ಟರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now