ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಿಲೀಸ್ ಗೆ ರೆಡಿಯಾದ ಶಿವ 143: ಮೊದಲ ಸಿನಿಮಾದಲ್ಲೇ ಭವಿಷ್ಯದ ಭರವಸೆಯ ನಾಯಕ ಎನಿಸಿಕೊಂಡ ಧೀರೇನ್ ರಾಮ್ ಕುಮಾರ್
ಮೊದಲ ಸಿನಿಮಾದಲ್ಲೇ ಧೀರೇನ್ ರಾಮ್ ಕುಮಾರ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಹಿರೋ ಆಗಲು ಬೇಕಿರುವ ಎಲ್ಲಾ ಕ್ವಾಲಿಟಿಗಳು ಧೀರೇನ್ ರಾಮ್ ಕುಮಾರ್ ಬಳಿ ಇದ್ದು ಭವಿಷ್ಯದ ಭರವಸೆಯ ಹಿರೋ ಆಗೋದ್ರಲ್ಲಿ ಯಾವ ಅನುಮಾನವು ಇಲ್ಲ.
ಸಿನಿಮಾದ ಬಿಡುಗಡೆ ಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಇಡೀ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಊರೂರು ಸುತ್ತಿ ಪ್ರಚಾರ ಮಾಡುತ್ತಿದೆ.
ಜಯಣ್ಣ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಶಿವ 143 ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಶಿವ 143’ ಚಿತ್ರದ ಹೀರೊ ಇಂಟ್ರಡಕ್ಷನ್ ಟೀಸರ್ ರಿಲೀಸ್ ಮಾಡಿ ಮೆಚ್ಚುಗೆ ಸೂಚಿಸಿದ್ದರು. ಇದೀಗ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ಸಿನಿಮಾದಲ್ಲಿ ಶಿವಣ್ಣನ ಸೂಪರ್ ಹಿಟ್ ‘ಓಂ’ ಸಿನಿಮಾ ರೆಫರೆನ್ಸ್ ತಗೊಂಡಿರುವುದು ಗೊತ್ತಾಗುತ್ತಿದೆ. ಸಿನಿಮಾ ಡೈಲಾಗ್‌ಗಳು ಸಖತ್ ಕಿಕ್ ಕೊಡ್ತಿದ್ದು, ಚರಣ್ ರಾಜ್, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಗಣೇಶ ಹಬ್ಬಕ್ಕೂ ಮೊದಲು ಅಂದರೆ ಆಗಸ್ಟ್ 26ರಂದು ‘ಶಿವ 143’ ಸಾಕಷ್ಟು ಅದ್ದೂರಿಯಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಡಾ.ರಾಜ್ ಕುಮಾರ್ ಮೊಮ್ಮಗ ಅನ್ನೋ ಕಾರಣಕ್ಕೆ ಸಿನಿಮಾ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಅಂದ ಹಾಗೆ ಪುನೀತ್ ರಾಜ್‌ಕುಮಾರ್ ಕೂಡ ಚಿತ್ರದ ಆಕ್ಷನ್ ದೃಶ್ಯದ ವಿಡಿಯೋವನ್ನು ನೋಡಿ,. “ಧೀರೇನ್ ಕಣ್ಣು ಎಷ್ಟು ಚೆನ್ನಾಗಿದೆ. ನಮ್ಮ ಕುಟುಂಬದಿಂದ ಒಳ್ಳೆ ಹೀರೊ ಬರುತ್ತಿದ್ದಾನೆ” ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದರಂತೆ.
ಇನ್ನು ‘ಶಿವ 143’ ಸಿನಿಮಾ ತೆಲುಗಿನ ‘ಆರ್‌ಎಕ್ಸ್ 100’ ರಿಮೇಕ್ ಎಂದು ಹೇಳಲಾಗುತ್ತಿದೆ. 4 ವರ್ಷಗಳ ಹಿಂದೆ ತೆಲುಗಿನಲ್ಲಿ ಈ ರಗಡ್ ಲವ್‌ಸ್ಟೋರಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಕಥೆಯನ್ನು ಆಧರಿಸಿ ಅನಿಲ್ ಕುಮಾರ್ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನೈಜ ಘಟನೆ ಆಧರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಆರಂಭದಲ್ಲಿ ಚಿತ್ರದಲ್ಲಿ ‘ದಾರಿ ತಪ್ಪಿದ ಮಗ’ ಅನ್ನುವ ಟೈಟಲ್ ಫೈನಲ್ ಇಟ್ಟಿತ್ತು ಚಿತ್ರತಂಡ. ಬಳಿಕ ‘ಶಿವ 143’ ಎಂದು ಬದಲಿಸಲಾಗಿತು.
