ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಡಿಯೋ ಹಂಚಿಕೊಂಡು ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಚಾಹಲ್ ದಂಪತಿ
ಧನಶ್ರೀ ಹಾಗೂ ಚಾಹಲ್ ಸಂಬಂಧದ ಬಗ್ಗೆ ವದಂತಿಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಧನಶ್ರೀ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ಜೀವನದ ಬಗ್ಗೆ ಆಧಾರವಿಲ್ಲದ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿ, ಇಂತಹ ವದಂತಿಗಳು ನೋವುಂಟುಮಾಡುತ್ತದೆ ಎಂದಿದ್ದರು. ಜೊತೆಗೆ ವಾರದ ಹಿಂದೆ ಚಾಹಲ್ ಕೂಡ ವೈವಾಹಿಕ ಜೀವನದ ಬಗ್ಗೆ ವದಂತಿಗಳನ್ನು ನಂಬಬೇಡಿ ಎಂದು ತನ್ನ ಅಭಿಮಾನಿಗಳಿಗೆ ಕೇಳಿಕೊಂಡಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಹಸೆಮಣೆ ಏರಿದ್ದ ಚಾಹಲ್ ಹಾಗೂ ಧನಶ್ರೀ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಡಿವೋರ್ಸ್ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ದಂಪತಿಗಳು ನೋವು ಅನುಭವಿಸಿದ್ದಾರೆ. ಧನಶ್ರೀ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಚಾಹಲ್ ಸರ್‌ನೇಮ್ ತೆಗೆದು ಹಾಕಿದ್ದರು. ಜೊತೆಗೆ ಯಜುವೇಂದ್ರ ಕೂಡ ಹೊಸ ಜೀವನ ಆರಂಭ ಎಂದು ಬರೆದುಕೊಂಡಿದ್ದರು. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಡಿವೋರ್ಸ್ ವಿಚಾರ ಸಖತ್ ಸೌಂಡ್ ಮಾಡಿತ್ತು.
