• June 2, 2026

ಪ್ರಭಾಸ್ ಸರ್ ಮದುವೆ ಆದರೆ ನಾನು ಆಗ್ತೀನಿ: ನಟ ಡಾಲಿ ಧನಂಜಯ್

ನಟ ಡಾಲಿ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿರುವ ನಟ ಧನಂಜಯ್ ವಿಭಿನ್ನ ಪಾತ್ರಗಳ ಮೂಲಕವೇ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ.ಈ ಮಧ್ಯೆ ಡಾಲಿ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಹರಿದಾಡುತ್ತಿದ್ದು ಇದಕ್ಕೆ ಧನಂಜಯ್ ಉತ್ತರ ನೀಡಿದ್ದಾರೆ, ಸದ್ಯ ಧನಂಜಯ್ ನೀಡಿರುವ ಉತ್ತರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧನಂಜಯ್ ನಟನೆಯ ಬಡವ ರಾಸ್ಕಲ್ ಸಿನಿಮಾ ಸೂಪರ್ ಹಿಟ್ ಆಗಿದ್ದು ಈ ಸಿನಿಮಾ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗಿದೆ. ತೆಲುಗಿನಲ್ಲಿ ಸಿನಿಮಾದ ಪ್ರಮೋಷನ್ ಗೆ ಹೋಗಿದ್ದ ವೇಳೆ ನೀಡಿದ ಸಂದರ್ಶನವೊಂದರಲ್ಲಿ ಧನಂಜಯ್ ಮದುವೆಯ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಧನಂಜಯ್ ಪ್ರಭಾಸ್ ಸರ್ ಮದುವೆ ಆಗ್ತಿದ್ದಾರಾ? ಪ್ರಭಾಸ್ ಸರ್ ಮದುವೆ ಆದರೆ ನಾನು ಮದುವೆ ಆಗ್ತೀನಿ. ಇಲ್ಲ ಎಂದರೆ ಮದುವೇನೇ ಬೇಡ.ಹಾಗೆ ಇದ್ದು ಬಿಡ್ತೀನಿ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಧನಂಜಯ್, ಒಂದು ಕಾರಣ ಬೇಕು ಅಲ್ವಾ.ನನ್ನ ಸ್ನೇಹಿತರು ಇದ್ದಾರೆ. ಅವರಲ್ಲಿ ಕೆಲವರು ಮದುವೆಯಾಗಿಲ್ಲ. ಅವರ ಮನೆಯಲ್ಲಿ ಮದುವೆ ಬಗ್ಗೆ ಕೇಳಿದರೆ, ಧನಂಜಯ್ ಮದುವೆ ಆದರೆ ನಾವು ಆಗ್ತೀನಿ ಅಂತಾರೆ, ಹಾಗೆಯೇ ನಾನು ಕೂಡ ಸಲ್ಮಾನ್ ಖಾನ್, ಪ್ರಭಾಸ್ ಹೆಸರು ತೆಗೆದುಕೊಳ್ತಿನಿ. ಅವರೆಲ್ಲಾ ನನ್ನ ಹಿರಿಯ ಸಹೋದರರು, ಮೊದಲು ಅವರು ಮದುವೆ ಆಗಲಿ ಆ ಮೇಲೆ ನಾನು ಆಗ್ತೀನಿ ಎಂದಿದ್ದಾರೆ. ಡಾಲಿ ಧನಂಜಯ್ ಹೆಸರು ನಟಿ ಅಮೃತ ಅಯ್ಯಂಗಾರ್ ಜೊತೆ ಆಗಾಗ ಕೇಳಿ ಬರುತ್ತಿರುತ್ತದೆ. ಈ ಜೋಡಿಗಳು ಪ್ರೀತಿಸುತ್ತಿದ್ದು ಸದ್ಯದಲ್ಲೇ ಮದುವೆ ಆಗ್ತಾರೆ ಎನ್ನಲಾಗುತ್ತಿದೆ. ಆದರೆ ನಮ್ಮ ಮಧ್ಯೆ ಅಂತದ್ದೇನು ಇಲ್ಲ, ನಾವು ಒಳ್ಳೆ ಫ್ರೆಂಡ್ಸ್ ಅಷ್ಟೇ ಎಂದು ಧನಂಜಯ್ ಹಾಗೂ ಅಮೃತ ಹೇಳಿದ್ದಾರೆ. ಒಟ್ನಲ್ಲಿ ಧನಂಜಯ್ ಅಭಿಮಾನಿಗಳು ಮಾತ್ರ ಡಾಲಿ ಮದುವೆ ಹಿಂದೆ ಬಿದ್ದಿರೋದರಂತು ಸತ್ಯ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now