ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೆಲ ದಿನಗಳಿಂದ ನಾನು ರಣವೀರ್ ದೂರ ದೂರ ಇದ್ದೇವೆ: ದೀಪಿಕಾ ಪಡುಕೋಣೆ
ಹಾಗಂತ ರಣವೀರ್ ಹಾಗೂ ದೀಪಿಕಾ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಈ ಜೋಡಿಗಳು ಕೆಲಸದ ಕಾರಣದಿಂದ ಬೇರೆ ಬೇರೆ ನಗರಗಳಿಗೆ ತೆರಳಿರೋದಾಗಿ ದೀಪಿಕಾ ಹೇಳಿದ್ದಾರೆ. ಹಾಗಾಗಿ ಕೆಲವು ದಿನಗಳ ಮಟ್ಟಿಗೆ ಇಬ್ಬರು ಮನೆಯಿಂದ ದೂರ ದೂರ ಇರೋದಾಗಿ ದೀಪಿಕಾ ಹೇಳಿದ್ದಾರೆ.
‘ನನ್ನ ಪತಿ ಒಂದು ವಾರಗಳ ಕಾಲ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದರು. ಈಗತಾನೆ ವಾಪಸ್ ಬಂದಿದ್ದಾರೆ. ನನ್ನ ಮುಖ ನೋಡಿದರೆ ಅವರಿಗೆ ಖಂಡಿತಾ ಖುಷಿ ಆಗಲಿದೆ’ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಪ್ಯಾರಿಸ್ನಲ್ಲಿ ನಡೆದ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದರು.
