• March 16, 2026

ಬಿಗ್ ಬಾಸ್ ನಿಂದ ಸಾಜಿದ್ ಖಾನ್ ರನ್ನು ಹೊರಹಾಕಿ ಎಂದ ಡಿಸಿಡಬ್ಲ್ಯೂ ಮುಖ್ಯಸ್ಥೆಗೆ ಅತ್ಯಾಚಾರ ಬೆದರಿಕೆ

ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಮೀಟೂ ಆರೋಪಿ ನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿಯಾಗಿ ಆಟವಾಡುತ್ತಿದ್ದಾರೆ. ಆದರೆ ಸಾಜಿದ್ ಖಾನ್ ರನ್ನು ಮನೆಯಿಂದ ಹೊರ ಕಳುಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಪತ್ರ ಬರೆದಿದ್ದಾರೆ. ಇದೀಗ ಸ್ವಾತಿ ಮಳಿವಾಲ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆಯಂತೆ. ಕಳೆದ ಕೆಲ ದಿನಗಳ ಹಿಂದಷ್ಟೇ ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 16 ಶುರುವಾಗಿದೆ. ಈ ವೇಳೆ ಸಾಜಿದ್ ಖಾನ್ ದೊಡ್ಮನೆ ಎಂಟ್ರಿಗೆ ಸಾಕಷ್ಟು ವಿರೋಧಗಳು ಕೇಳಿ ಬಂದಿತ್ತು. ಈ ನಡುವೆಯೂ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ಸಾಜಿದ್ ಖಾನ್ ರನ್ನು ಹೊರಗೆ ಕಳುಹಿಸುವಂತೆ ಒತ್ತಾಯ ಕೇಳಿ ಬರ್ತಿದೆ. ಮೀಟೂ ಆಂದೋಲನ ಆರಂಭವಾದ ಸಂದರ್ಭದಲ್ಲಿ ಸಾಕಷ್ಟು ನಟಿಯರು ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅಲ್ಲದೆ ಕೆಲ ನಟಿಯರು ತಮಗಾದ ಅನ್ಯಾಯವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರೆ ಮತ್ತೊಂದಷ್ಟು ನಟಿಯರು ಈ ಬಗ್ಗೆ ದೂರು ನೀಡಿದ್ದರು.ಇಂತಹ ವ್ಯಕ್ತಿ ಬಿಗ್ ಬಾಸ್ ಮನೆಯಲ್ಲಿ ಇರುವುದು ಸರಿಯಲ್ಲ ಎಂದು. ತಕ್ಷಣವೇ ಈತನನ್ನು ಹೊರ ಕಳುಹಿಸಬೇಕೆಂದು ಸ್ವಾತಿ ಮಲಿವಾಲ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ, #MeToo ಆಂದೋಲನದ ಸಂದರ್ಭದಲ್ಲಿ ಹತ್ತು ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಎಲ್ಲಾ ದೂರುಗಳು ಸಾಜಿದ್ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಈಗ ಈ ವ್ಯಕ್ತಿಗೆ ಬಿಗ್ ಬಾಸ್‌ನಲ್ಲಿ ಸ್ಥಾನ ನೀಡಲಾಗಿದೆ, ಅದು ತಪ್ಪು. ನಾನು ಅನುರಾಗ್ ಠಾಕೂರ್ ಅವರಿ ಗೆ ಪತ್ರ ಬರೆದಿದ್ದೇನೆ. ಈ ಕಾರ್ಯಕ್ರಮದಿಂದ ಸಾಜಿದ್ ಖಾನ್ ಅವರನ್ನು ಹೊರಹಾಕಬೇಕು ಎಂದು ಸ್ವಾತಿ ಹೇಳಿದ್ದರು. ಸಾಜಿದ್ ಖಾನ್ ರನ್ನು ಮನೆಯಿಂದ ಹೊರ ಹಾಕಲು ಸ್ವಾತಿ ಪತ್ರ ಬರೆಯುತ್ತಿದ್ದಂತೆ ಅವರಿಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆಯಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ, ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್‌ನಿಂದ ಹೊರ ಹಾಕುವಂತೆ ನಾನು ಕೇಂದ್ರ ಸಚಿವರಿಗೆ ಪತ್ರ ಬರೆದಾಗಿನಿಂದ, ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ನಿಸ್ಸಂಶಯವಾಗಿ, ಅವರು ನಮ್ಮ ಕೆಲಸವನ್ನು ನಿಲ್ಲಿಸಲು ಬಯಸುತ್ತಾರೆ. ನಾನು ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡುತ್ತಿದ್ದೇನೆ. ತನಿಖೆ ನಡೆಸಿ, ಬೆದರಿಕೆಯ ಹಿಂದಿರುವವರನ್ನು ಬಂಧಿಸಿ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now