• January 1, 2026

ಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಕಳೆದ ಸಾಕಷ್ಟು ದಿನಗಳಿಂದ ಹರಿದಾಡುತ್ತಲೆ ಇದೆ. ಬಳಿಕ ಅಷ್ಟೇ ವೇಗವಾಗಿ ಇಬ್ಬರ ಪ್ರೀತಿಗೂ ಬ್ರೇಕ್ ಬಿದ್ದಿತ್ತು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಆಗಲಿ ವಿಜಯ್ ದೇವರಕೊಂಡ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆಗಿನ ಲವ್ ಕುರಿತಾಗಿ ರಶ್ಮಿಕಾ ಬಾಯಿ ಬಿಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದು ಓಡಾಡಿದ್ದರು. ಪಾರ್ಟಿ, ಫಕ್ಷನ್ ಅಂತ ಟೈಂ ಸ್ಪೆಂಡ್ ಮಾಡಿದ್ದರು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಡೇಟಿಂಗ್ ಕುರಿತಾಗಿ ಈ ಹಿಂದೆ ಮಾತನಾಡಿದ್ದ ವಿಜಯ್ ದೇವರಕೊಂಡ, ನಮ್ಮಿಬ್ಬರ ಮಧ್ಯ ಅಂಥದ್ದೇನೂ ಇಲ್ಲ. ಆಕೆ ಬೆಸ್ಟ್ ಫ್ರೆಂಡ್. ಸಿನಿಮಾ ರಂಗದಲ್ಲಿ ಇಬ್ಬರೂ ಬೆಳೆಯುತ್ತಿದ್ದೆವು. ಒಟ್ಟೊಟ್ಟಿಗೆ ಸಿನಿಮಾ ಮಾಡಿದೆವು. ಜಾಹೀರಾತಿನಲ್ಲೂ ಕಾಣಿಸಿಕೊಂಡೆವು. ಹಾಗಾಗಿ ಜೊತೆ ಇರಬೇಕಾಗುತ್ತಿತ್ತು. ಅದನ್ನೇ ಕೆಲವರು ಡೇಟಿಂಗ್ ಅಂದುಕೊಂಡರು ಎಂದಿದ್ದರು. ಇದೀಗ ರಶ್ಮಿಕಾ ಕೂಡ ಅದೇ ಮಾತನ್ನು ಹೇಳಿದ್ದಾರೆ.  ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿಯನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದರು. ಈ ಜೋಡಿ ಒಟ್ಟಿಗೆ ನಟಿಸಿದ್ದ ಗೀತಾ ಗೋವಿಂದ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹೀಗಾಗಿ ಮತ್ತೆ ಈ ಜೋಡಿಯನ್ನು ತೆರೆಮೇಲೆ ನೋಡ್ಬೇಕು ಅನ್ನೋ ಆಸೆ ಅಭಿಮಾನಿಗಳದ್ದು. ಇದೀಗ ಅದಕ್ಕೂ ನಟಿ ರಶ್ಮಿಕಾ ಉತ್ತರ ನೀಡಿದ್ದಾರೆ. ‘ನನ್ನ ಮತ್ತು ವಿಜಯ್ ಜೋಡಿಯನ್ನು ಎಲ್ಲರೂ ಮೆಚ್ಚಿದ್ದಾರೆ. ಮತ್ತೆ ಸಿನಿಮಾ ಮಾಡಬೇಕು ಎಂದು ಹಲವರು ಕೇಳಿದ್ದಾರೆ. ವಿಜಯ್ ಮತ್ತು ನಾನು ಮತ್ತೆ ಸಿನಿಮಾ ಮಾಡುತ್ತೇವೆ. ಇಬ್ಬರಿಗೂ ಒಟ್ಟಿಗೆ ಅಭಿನಯಿಸಬೇಕು ಅನ್ನುವ ಆಸೆ ಇದೆ ಎಂದು ರಶ್ಮಿಕಾ  ಖಾಸಗಿ ವಾಹಿನಿಯಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರಶ್ಮಿಕಾ ವಿಜಯ್ ದೇವರಕೊಂಡ ಮತ್ತೆ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದಷ್ಟು ಬೇಗ ಈ ಜೋಡಿ ತೆರೆ ಮೇಲೆ ಕಮಾಲ್ ಮಾಡಲು ಎಂದು ಆಶೀಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now