ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ದರ್ಶನ್ 56ನೇ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ನಾಯಕಿ: ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು
ದರ್ಶನ್ ಗೆ ಜೋಡಿಯಾಗಿ ಮಾಲಾಶ್ರೀ ಪುತ್ರಿಯನ್ನು ಆಯ್ಕೆ ಮಾಡಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ತರುಣ್ ಸುಧೀರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ರಾಬರ್ಟ್ ಸಿನಿಮಾಕ್ಕೆ ಆಶಾ ಭಟ್ ರನ್ನು ಕರೆ ತಂದಿರಿ. ಆ ಬಗ್ಗೆ ಖುಷಿ ಇತ್ತು. ಆದರೆ ಇದೀಗ ಆಯ್ಕೆ ಮಾಡಿರುವ ನಟಿಯೂ ದರ್ಶನ್ ಗೆ ಸೂಟ್ ಆಗಲ್ಲ ಅಂತಿದ್ದಾರೆ.
ಜೊತೆಗೆ ದರ್ಶನ್ ಗೆ ನಾಯಕಿಯನ್ನು ಆಯ್ಕೆ ಮಾಡಲು ಆಗದಿದ್ದರೆ ನಿರ್ದೇಶಕರು ಯಾಕೆ ಆಗಿದ್ದೀರಿ. ನಿರ್ದೇಶನ ಬಿಟ್ಟು ಅಸಿಸ್ಟೆಂಡ್ ಡೈರೆಕ್ಟರ್ ಆಗಿ. ಹಿರೋಯಿನ್ ಚೇಂಜ್ ಮಾಡಿ, ಇಲ್ಲವೇ ಸಿನಿಮಾವನ್ನೇ ಸ್ಟಾಪ್ ಮಾಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸದ್ಯದಲ್ಲೇ ದರ್ಶನ್ ನಟನೆಯ ಮುಂದಿನ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು ನಿರ್ದೇಶಕರು ನಟಿಯನ್ನು ಬದಲಾಯಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
