• January 1, 2026

ಕೊನೆಗೂ ರಿವೀಲ್ ಆಯ್ತು ಹೆಡ್ ಬುಷ್ ಚಿತ್ರದಲ್ಲಿ ಕ್ರೇಜಿಸ್ಟಾರ್ ಲುಕ್: ರವಿಚಂದ್ರನ್ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್

ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಹೆಟ್ ಬುಷ್ ಸಿನಿಮಾ ಇದೇ ಅ. 21ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಇದೇ ಅ.16ರಂದು ದಾವಣಗೆರೆಯಲ್ಲಿ ಚಿತ್ರದ ಪ್ರೀರಿಲೀಸ್ ಈವೆಂಟ್ ಆರ್ಗನೈಸ್ ಮಾಡಲಾಗಿದೆ. ಹೆಡ್ ಬುಷ್ ಡಾನ್ ಕುರಿತಾದ ಸಿನಿಮಾವಾಗಿದ್ದು ಚಿತ್ರದಲ್ಲಿ ಧನಂಜಯ್ ರೆಟ್ರೊ ಲುಕ್ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಮತ್ತೋರ್ವ ಪ್ರಮುಖ ಪಾತ್ರಧಾರಿ ಕ್ರೇಜಿಸ್ಟಾರ್ ರವಿಚಂದ್ರನ್ ಲುಕ್ ರಿವೀಲ್ ಆಗಿದೆ. ಹೆಡ್ ಬುಷ್ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಲುಕ್ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿಗೆ ಬ್ರೇಕ್ ಬಿದ್ದಿದೆ. ಚಿತ್ರದಲ್ಲಿ ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ರವಿಮಾಮನ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ರಿವೀಲ್ ಆಗಿರುವ ಫೋಟೋದಲ್ಲಿ ರವಿಚಂದ್ರನ್ ಮೆರೂನ್ ಬಣ್ಣದ ಶರ್ಟ್ ತೊಟ್ಟಿದ್ದು ಕಣ್ಣೀಗೆ ಕಪ್ಪು ಕನ್ನಡಕ ಧರಿಸಿದ್ದಾರೆ. ಫಿಲಾಸಪಿ ಕಥೆ ಹೇಳುವ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ತಿದ್ದಾರೆ. ಹೆಡ್ ಬುಷ್ ರೆಟ್ರೋ ಕಾಲದ ಕಥೆಯುಳ್ಳ ಚಿತ್ರವಾಗಿದ್ದು ಇದೇ ಕಾರಣಕ್ಕೆ ಇತ್ತೀಚೆಗೆ ಚಿತ್ರತಂಡ ರೆಟ್ರೋ ಸ್ಟೈಲ್ ನಲ್ಲೇ ಸೈಕಲ್ ಏರಿ ಸಿನಿಮಾದ ಪ್ರಚಾರ ನಡೆಸಿದ್ದರು. ಹೆಡ್ ಬುಷ್ ಸಿನಿಮಾ ಅ.21ರಂದು ತೆರೆಗೆ ಬರಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now