• January 2, 2026

ಬಿಗ್ ಬಾಸ್ ಮನೆಯನ್ನು ವೇಶ್ಯಾ ಗೃಹಕ್ಕೆ ಹೋಲಿಸಿದ ಸಿಪಿಐ ಮುಖಂಡ

ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರೋ ಬಿಗ್ ಬಾಸ್  ಕಾರ್ಯಕ್ರದ ಬಗ್ಗೆ ಆರಂಭದಿಂದಲೂ ಒಂದಲ್ಲ ಒಂದು ಟೀಕೆಗಳು ಕೇಳಿಬರುತ್ತಲೆ ಇದೆ.ಆರಂಭದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದು ದಿನಕಳೆದಂತೆ ಅದು ತಣ್ಣಗಾಗುತ್ತಿದೆ. ಇದೀಗ ಆಂಧ್ರದ ಸಿಪಿಐ ಮುಖಂಡ ನಾರಾಯಣ ತೆಲುಗು ಬಿಗ್ ಬಾಸ್ ಕುರಿತು ಆಕ್ಷೇಪ ಹೊರ ಹಾಕಿದ್ದಾರೆ. ಅಣ್ಣ, ತಮ್ಮಂದಿರಲ್ಲದ, ಅಕ್ಕ-ತಂಗಿಯರಲ್ಲದ, ಗಂಡ-ಹೆಂಡತಿಯರಲ್ಲದ ಒಟ್ಟಾರೆ ಏನು ಸಂಬಂಧವಿಲ್ಲದವರನ್ನು ಒಂದು ಮನೆಯಲ್ಲಿ, ಒಂದು ಕೋಣೆಯಲ್ಲಿ ಇರಲು ಬಿಡುವುದು ಹೇಗೆ ಸರಿಯಾಗುತ್ತದೆ. ಸಭ್ಯ ಸಮಾಜ ಬಿಗ್ ಬಾಸ್ ಶೋ ಅನ್ನು ವಿರೋಧಿಸಬೇಕು, ಇದು ಒಳ್ಳೆಯ ಸಂಪ್ರದಾಯವಲ್ಲ. ಅಂಥಹಾ ಮನೆಯೊಳಗೆ ತಮ್ಮ ಮಕ್ಕಳನ್ನು ಪೋಷಕರು ಹೇಗೆ ಕಳುಹಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಪರಸ್ಪರ ಪರಿಚಯವೇ ಇಲ್ಲದ ಯುವಕ,ಯುವತಿಯರನ್ನು ಒಟ್ಟಿಗೆ ಬದುಕಲು ಬಿಡುವುದು ಬ್ರಾತಲ್ ಹೌಸ್ ಮಾದರಿಯಂತೆ. ವೇಶ್ಯಾಗೃಹಕ್ಕೆ ಹೋಗಿ ಬರುವವರು ಹೆಮ್ಮೆಯಿಂದ ಹೊರಗೆ ಬರಲು ಸಾಧ್ಯವೇ? ಆ ಮನೆಯಲ್ಲಿ ಕಲಿಯಲು ಏನು ಇಲ್ಲ ಎಂದಿದ್ದಾರೆ. ನಾರಾಯಣ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ನಟ, ಬಿಗ್ ಬಾಸ್ ನಿರೂಪಕ ನಾಗಾರ್ಜುನ್ ಅವರನ್ನು ಅಣಕಿಸುವಂತೆ ಪ್ರಶ್ನೆ ಮಾಡಿದ್ದಾರೆ. ನಾಗಣ್ಣ ನಾಗಣ್ಣ, ಈ ಬಿಗ್ ಬಾಸ್ ಶೋನಲ್ಲಿ ನೀವು ಮದುವೆ ಆದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ, ಶೋಭನ ಕೋಣೆ ಅರೇಂಜ್ ಮಾಡಿದ್ದೀರಿ. ಮದುವೆ ಆಗದವರ ಕತೆ ಏನು? ಆ ನೂರು ದಿನ ಅವರು ಅಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕಳೆದ ವಾರ ಆರಂಭವಾದ ಬಿಗ್ ಬಾಸ್ ತೆಲುಗು 6ನೇ ಸೀಸನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಟಿಆರ್ ಪಿ ರೇಟಿಂಗ್ ನಲ್ಲಿ ಬಿಗ್ ಬಾಸ್ ಮುಂದಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now