• January 2, 2026

ಬಿಗ್ ಬಾಸ್ ಮನೆಗೆ ಎಂಟ್ರಿಕೊಡೋಕೆ ಕಾಫಿ ನಾಡು ಚಂದು ನಾನಾ ಕಸರತ್ತು: ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಡ್ತಾರಾ ಸೋಷಿಯಲ್ ಮೀಡಿಯಾ ಸ್ಟಾರ್

ನಾನು ಶಿವಣ್ಣ, ಪುನೀತ್ ಅಣ್ಣನ ಅಭಿಮಾನಿ ಎಂದು ಹೇಳುತ್ತ ಬರ್ತಡೇ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರುವ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಹೋಗ್ಬೇಕು ಅನ್ನೋದು ಸಾಕಷ್ಟು ಮಂದಿಯ ಅಭಿಪ್ರಾಯವಾಗಿತ್ತು. ಆದರೆ ಬಿಗ್ ಬಾಸ್ ಮನೆಗೆ ಈಗಾಗ್ಲೆ 16 ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾಗಿ. ಚಂದು  ಬಿಗ್ ಬಾಸ್ ಮನೆಯೊಳಗೆ ಹೋಗದೆ ಇದ್ದಿದ್ದಕ್ಕೆ ಅಭಿಮಾನಿಗಳ ಬೇಸರ ವ್ಯಕ್ತಪಡಿಸಿದ್ರು. ಆದ್ರೆ ಚಂದ್ರು ಮಾತ್ರ ಸುಮ್ಮನ್ನೆ ಕೂತಿಲ್ಲ. ದೊಡ್ಮನೆ ಒಳಗೆ ಹೋಗಲು ಹೊಸ ಕಸರತ್ತು ಶುರು ಮಾಡಿದ್ದಾರೆ. ನನಗೆ ಬಿಗ್​ಬಾಸ್​ ಮನೆಗೆ ಹೋಗಲು ಇಷ್ಟವಿದೆ, ಅವಕಾಶ ಸಿಕ್ಕರೆ ಹೋಗುವುದಾಗಿ ಕಾಫಿ ನಾಡು ಚಂದು ಹೇಳಿಕೊಂಡಿದ್ದರು. ಆದರೆ ಅದು ಕೊನೆಗೂ ಸಾಧ್ಯವಾಗಿಲಿಲ್ಲ. ಹೇಗಾದ್ರೂ ಮಾಡಿ ದೊಡ್ಮನೆಗೆ ಎಂಟ್ರಿಕೊಡಲೇ ಬೇಕು ಎಂದು ಕೊಂಡಿರುವ ಕಾಫಿ ನಾಡು ಚಂದು ತಾವೇ ಹೊಸ ಅಭಿಯಾನವೊಂದನ್ನು ಶುರು ಮಾಡಿದ್ದಾರೆ. ಎಲ್ಲರ ಬಳಿ ತೆರಳಿ ಕಾಫಿ ನಾಡಿನ ಚಂದು ಅವರನ್ನು ಬಿಗ್​ಬಾಸ್​ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ. ತಾನೂ ಬಿಗ್​ಬಾಸ್​ ಮನೆಗೆ ಹೋಗಬೇಕೆಂದು ಹಲವಾರು ಬಾರಿ ಕಾಫಿ ನಾಡಿನ ಚಂದು ಹೇಳಿಕೊಂಡಿದ್ದರು. ಅದು ಕೊನೆಗೂ ಸಾಧ್ಯವಾಗಲಿಲ್ಲ. ಆದರೂ ಸುಮ್ಮನೆ ಕೂರದ ಕಾಫಿ ನಾಡಿನ ಚಂದು ಹೊಸದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೊಸ ಅಭಿಯಾನವೊಂದನ್ನು ತಾವೇ ಶುರು ಮಾಡಿಕೊಂಡಿದ್ದಾರೆ. ಎಲ್ಲರ ಬಳಿ ತೆರಳಿ ಕಾಫಿ ನಾಡಿನ ಚಂದು ಅವರನ್ನು ಬಿಗ್​ಬಾಸ್​ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ. ಆಟೋ ಓಡಿಸಿಕೊಂಡಿರುವ ಕಾಫಿ ನಾಡು ಚಂದು ಪ್ರತಿ ದಿನ ಸಮಯ ವ್ಯರ್ಥ ಮಾಡದೇ ಈ ಅಭಿಯಾನವನ್ನು ಮಾಡ್ತಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯ ಬಳಿ ತೆರಳಿ ತನಗೆ ಸಪೋರ್ಟ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರಂತೆ. ಒಟ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಡ್ತಾರೆ ಅನ್ನೋ ಮಾತುಕೇಳಿ ಬರ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now