ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅನುಶ್ರೀ ಕೈಯಿಂದ ದುಬಾರಿ ಉಡುಗೊರೆ ಪಡೆದ ಕಾಫಿ ನಾಡು ಚಂದು
ಕಾಫಿ ನಾಡು ಚಂದು ಅವರಿಗೆ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬುದು ಬಹುದಿನಗಳ ಕನಸಾಗಿತ್ತು.ಇದೀಗ ಅದು ಡಿಕೆಡಿ ವೇದಿಕೆಯಲ್ಲಿ ನೆರವೇರಿದೆ. ಡಿಕೆಡಿ ಕಾರ್ಯಕ್ರಮಕ್ಕೆ ಬಂದ ಕಾಫಿ ನಾಡು ಚಂದು ಅವರನ್ನು ಎಲ್ಲರು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಈ ವೇಳೆ ಚಂದುಗೆ ಅನುಶ್ರೀ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚಂದು ಕೈಗೆ ವಾಚ್ ತೊಡಿಸಿದ ಅನುಶ್ರೀ ‘ಚೆನ್ನಾಗಿ ಹಾಡಿ. ಇನ್ನೂ ನಾಲ್ಕೈದು ಜನರಿಗೆ ನೀವು ಸಹಾಯ ಮಾಡಬೇಕು’ ಎಂದು ಕಿವಿಮಾತು ಹೇಳಿದ್ದಾರೆ. ಅಲ್ಲದೆ ಶಿವಣ್ಣ ಕೂಡ ಚಂದು ಬಗ್ಗೆ ಮೆಚ್ಚಿಗೆ ಮಾತನಾಡಿದ್ದು ಇಂತಹ ಅಭಿಮಾನಿಯನ್ನು ಪಡೆಯೋಕೆ ಪುಣ್ಯ ಮಾಡಿರಬೇಕು ಎಂದರು.
ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಅನುಶ್ರೀ ಕೈಯಿಂದ ಉಡುಗೊರೆ ಪಡೆದ ಚಂದುಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯಲ್ಲಿ ಏನು ನಡೆಯಿತು ಎಂಬುದರ ಝಲಕ್ ತೋರಿಸುವ ಪ್ರೋವೋವನ್ನು ಕೂಡ ಕಾಫಿ ನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
