ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಸಂಭ್ರಮ
ಈ ವಾರದ ಮತ್ತೊಂದು ಭರವಸೆಯ ಸಿನಿಮಾ ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದಿರುವ ಓ ಮೈ ಲವ್ ಚಿತ್ರ. ಈ ಚಿತ್ರದ ಮೂಲಕ ಹಿರಿಯ ನಟ ಶಶಿಕುಮಾರ್ ಪುತ್ರ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿಕೊಡ್ತಿದ್ದಾರೆ. ಜೊತೆಗೆ ರಾಧಿಕಾ ನಾರಾಯಣ್ ಹಾಗೂ ಅವಿನಾಶ್ ನರಸಿಂಹರಾಜು ನಟನೆಯ ಚೇಸ್ ಸಿನಿಮಾ ಕೂಡ ಈ ವಾರ ತೆರೆಗೆ ಬರ್ತಿದೆ.
ಮಿಥುನ್ ಚಂದ್ರಶೇಖರ್ ನಿರ್ದೇಶನ, ವಿಕ್ರಮ್ ಆರ್ಯ ನಟನೆಯ ಪದ್ಮಾವತಿ ಸಿನಿಮಾ ಕೂಡಾ ಸಾಕಷ್ಟು ಭರವಸೆ ಮೂಡಿಸಿದೆ. ಇದರ ಜೊತೆಗೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಡ್ಕಿ ಸಿನಿಮಾ ಕನ್ನಡದಲ್ಲಿ ಹುಡುಗಿ ಟೈಟಲ್ ನಲ್ಲಿ ತೆರೆಗೆ ಬರ್ತಿದೆ. ಇದರ ಜೊತೆಗೆ ಸಾಯಿ ಪಲ್ಲವಿ ನಟನೆಯ ಗಾರ್ಗಿ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗ್ತಿದೆ.
ಒಟ್ನಲ್ಲಿ ಈ ವಾರ ಎಂಟು ಸಿನಿಮಾಗಳು ತೆರೆಗೆ ಬರ್ತಿರೋದ್ರಿಂದ ಅಭಿಮಾನಿಗಳು ಸಹಜವಾಗಿಯೇ ಯಾವ ಸಿನಿಮಾ ನೋಡೋದು ಎಂಬ ಗೊಂದಲದಲ್ಲಿದ್ದಾರೆ.
