ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಚಂಕಿ ಪಾಂಡೆಗೆ ಸಿನಿ ರಂಗದ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಪಾಂಡೆ
ನನ್ನ ಗಂಡನಿಗೆ ಸಿನಿಮಾ ರಂಗದ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು. ಅದು ನನಗೂ ಗೊತ್ತಿತ್ತು. ನನಗೆ ಗೊತ್ತಿದೆ ಅಂತ ಚಂಕಿ ಪಾಂಡೆಗೂ ಗೊತ್ತಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಚಂಕಿ ಪಾಂಡೆಯ ಸತ್ಯ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ ಭಾವನಾ ಪಾಂಡೆ ಪತಿಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಹೆಚ್ಚಿಗೆ ಸೆಕ್ಸ್ ಲೈಫ್, ಸೆಕೆಂಡ್ ಅಫೇರ್, ಅನೈತಿಕ ಸಂಬಂಧಗಳ ಬಗ್ಗೆಯೇ ಹೆಚ್ಚಾಗಿ ಕೇಳಲಾಗುತ್ತದೆ. ಶೋನಲ್ಲಿ ಭಾಗವಹಿಸಿದವರು ಕೂಡ ಯಾವುದೇ ಮುಜುಗರ ಇಲ್ಲದೆ ಮಾತನಾಡುತ್ತಾರೆ. ಇದೀಗ ಚಂಕಿ ಪಾಂಡೆ ಬಗ್ಗೆ ಪತ್ನಿ ಬಹಿರಂಗವಾಗಿಯೇ ಮಾತನಾಡಿರೋದು ಬಾಲಿವುಡ್ ಚಿತ್ರರಂಗಕ್ಕೆ ಚರ್ಚೆಗೆ ಗ್ರಾಸವಾಗಿದೆ.
