ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ: ಕಿರಿಕ್ ಹುಡುಗಿಯ ಅದೃಷ್ಟ ನೋಡಿ ಖುಷಿಯಾಗಿ ಅಭಿಮಾನಿಗಳು
ಚಿಯಾನ್ ವಿಕ್ರಮ್ ನಟನೆಯ 61ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈಗಾಗಲೇ ರಶ್ಮಿಕಾ ನಿರ್ಮಾಪಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಸದ್ಯ ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇರೋದ್ರಿಂದ ಡೇಟ್ ಹೊಂದಾಣಿಕೆ ಮಾಡಿಕೊಂಡು ವಿಕ್ರಾಮ್ ಸಿನಿಮಾದಲ್ಲಿ ನಟಿಸಬೇಕಿದೆ. ಡೇಟ್ಸ್ ಹೊಂದಾಣಿಕೆ ಆದ ಬಳಿಕ ಚಿತ್ರತಂಡದಿಂದ ಅಧಿಕೃತ ಅನೌನ್ಸ್ ಮೆಂಟ್ ಆಗಲಿದೆ ಎಂಬ ಮಾತು ಕೇಳಿ ಬರ್ತಿದೆ.
ಚಿಯಾನ್ ವಿಕ್ರಮ್ ನಟನೆಯ 61ನೇ ಸಿನಿಮಾಗೆ ಪಾ.ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕಬಾಲಿ, ಕಾಲಾ ಸಿನಿಮಾಗೆ ಪಾ.ರಂಜಿತ್ ಆಕ್ಷನ್ ಕಟ್ ಹೇಳಿದ್ದರು.
