• January 2, 2026

ಸಾವಿನಲ್ಲೂ ಸಾರ್ಥಕತೆ ಮೆರೆದ 18ರ ಯುವತಿ: ಕುಟುಂಬಸ್ಥರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

ಚಿಕ್ಕಮಗಳೂರು: ಬಸ್‍ನಿಂದ ಇಳಿಯುವಾಗ ಆಯಾ ತಪ್ಪಿ ಬಿದ್ದು ಬ್ರೈನ್ ಡೆಡ್ ಆಗಿದ್ದ ಚಿಕ್ಕಮಗಳೂರಿನ ಯುವತಿ ರಕ್ಷಿತಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರಕ್ಷಿತಾ ಹೆತ್ತವರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಸ್ ನಿಂದ ಬಿದ್ದು ಬ್ರೈನ್ ಡೆಡ್ ಆಗಿದ್ದ ರಕ್ಷಿತಾ ಅಂಗಾಗಳು 9 ಜನರ ಜೀವ ಉಳಿಸಿದೆ. ರಕ್ಷಿತಾ ಹೃದಯವನ್ನು ಬೆಂಗಳೂರಿಗೆ ಏರ್‌ಲಿಫ್ಟ್‌ ಮಾಡಲಾಗಿದ್ದು, ಅವರ ಕಣ್ಣು  ಹಾಗೂ ಕಿಡ್ನಿಯನ್ನು ಮಂಗಳೂರಿಗೆ ಝೀರೋ ಟ್ರಾಫಿಕ್‍ ಮೂಲಕ ರವಾನಿಸಲಾಗಿದೆ. ರಕ್ಷಿತಾ ಅವರ ಲಿವರ್ ಉಡುಪಿಗೆ ಕಳಿಸಲಾಗಿದ್ದು, ಹೃದಯವನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿರುವ 12 ವರ್ಷದ ಬಾಲಕಿಗೆ ಕಸಿ ಮಾಡಲಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ ಧನ್ಯವಾದ ಹೇಳಿದ್ದಾರೆ. ರಕ್ಷಿತಾ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಡೂರಿನ ಸೋಮನಹಳ್ಳಿ ತಾಂಡಾಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಯಿತು. ತಂದೆ, ತಾಯಿ, ದೊಡ್ಡಪ್ಪ,ಚಿಕ್ಕಪ್ಪ ಸೇರಿದಂತೆ ತುಂಬು ಕುಟುಂಬದಲ್ಲಿ ಬೆಳೆದ ರಕ್ಷಿತಾ 14 ಜನ ಅಣ್ಣತಮ್ಮಂದಿರ ಮುದ್ದಿನ ತಂಗಿ. ಈಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿದ್ದರು. ಆದರೆ ಕೊನೆಗೂ ಆದರೆ ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಹೆತ್ತವರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಅದರಂತೆ 9 ಜನರಿಗೆ ರಕ್ಷಿತಾಳ ಅಂಗಾಂಗ ದಾನ ಮಾಡಲಾಗಿದ್ದು ಕುಟುಂಬಸ್ಥರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now