ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರಿಗೆ ಒಂದು ನ್ಯಾಯ, ಹುಡುಗರಿಗೆ ಒಂದು ನ್ಯಾಯ: ಸೋನು ಗೌಡ ಆರೋಪ
ಸೋನು ಗೌಡ ಹಾರ್ಲಿಕ್ಸ್ ಬೇಕೆಂದು ತನ್ನ ತಾಯಿಯಲ್ಲಿ ಮನವಿ ಮಾಡಿದ್ದರು. ಅಲ್ಲದೆ ಹಾರ್ಲಿಕ್ಸ್ ತಂದುಕೊಡುವಂತೆ ತಿಳಿಸಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಹೊರಗಿನಿಂದ ಯಾವುದೇ ವಸ್ತುಗಳನ್ನು ಮನೆಯೊಳಗೆ ತರುವಂತಿಲ್ಲ ಎಂಬ ಕಟ್ಟು ನಿಟ್ಟಿನ ನಿಯಮವಿದೆ.
ಇದೇ ಕಾರಣಕ್ಕೆ ಸೋನು ಗೌಡ ಅವರು ಕೇಳಿದ ಹಾರ್ಲಿಕ್ಸ್ ತಂದುಕೊಡಲು ಬಿಗ್ ಬಾಸ್ ನಿರಾಕರಿಸಿದೆ. ಇದರಿಂದ ಕೋಪಗೊಂಡ ಸೋನು ಇಲ್ಲಿ ಹುಡುಗರಿಗೆ ಒಂದು ನ್ಯಾಯ, ಹುಡುಗಿಯರಿಗೆ ಒಂದು ನ್ಯಾಯ ಎಂದು ಆರೋಪಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಪ್ರೋಟೀನ್ ಪೌಡರ್ ತಂದು ಕೊಡುತ್ತಾರೆ. ಆದರೆ ನಾವು ಕೇಳಿದರೆ ಹಾರ್ಲಿಕ್ಸ್ ತಂದುಕೊಡುವುದಿಲ್ಲ ಎಂದು ಅಸಮಧಾನ ಹೊರ ಹಾಕಿದ್ದಾರೆ.
