• March 14, 2026

ನಿವೇದಿತಾ ತುಟಿಗೆ ಮುತ್ತಿದ್ದ ಚಂದನ್ ಶೆಟ್ಟಿ: ವಿಡಿಯೋ ವೈರಲ್

ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರೀತಿಸಿದ್ದ ಜೋಡಿ ಬಳಿಕ ಮದುವೆಯಾಗಿ ಈಗ ಖುಷಿಯಾಗಿ ಸಂಸಾರ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದಾಗ ಈ ಜೋಡಿಗಳು ಹೆಚ್ಚು ದಿನ ಅನ್ಯೋನ್ಯವಾಗಿರುವುದಿಲ್ಲ ಎಂದಿದ್ದರು. ಆದರೆ ಆ ಮಾತನ್ನು ಸುಳ್ಳು ಮಾಡಿರೋ ಚಂದನ್ ಹಾಗೂ ನಿವೇದಿತಾ ಇಬ್ಬರು ಹಾಯಾಗಿ ಮ್ಯಾರೇಜ್ ಲೈಫ್ ಲೀಡ್ ಮಾಡ್ತಿದ್ದಾರೆ. ಇದೀಗ ನಿವೇದಿತಾ ಹಂಚಿಕೊಂಡಿರುವ ಹೊಸ ವಿಡಿಯೋ ಸಖತ್ ವೈರಲ್ ಆಗಿದೆ.  ಸಾಮಾಜಿಕ ಜಾಲಾತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಿವೇದಿತಾ ಸಮಯ ಸಿಕ್ಕಾಗೆಲ್ಲಾ ರೀಲ್ಸ್ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ನಿವೇದಿತಾರ ಫೋಟೋಸ್ ಹಾಗೂ ವಿಡಿಯೋಗಳನ್ನು ನೋಡಲು ಅಭಿಮಾನಿಗಳು ಕಾದು ಕೂತಿರ್ತಾರೆ. ಇದೀಗ ನಿವೇದಿತಾ ಹೊಸ ರೀಲ್ಸ್ ಹಂಚಿಕೊಂಡಿದ್ದು ಅದರಲ್ಲಿ ಚಂದನ್ ನಿವೇದಿತಾ ತುಟಿಗೆ ಮುತ್ತಿಟ್ಟಿದ್ದಾರೆ. ಚಂದನ್ ಹಾಗೂ ನಿವೇದಿತಾ ಗಲ್ಲಿ ಬಾಯ್ ಡ್ಯಾನ್ಸ್ ಮಾಡ್ತಾ ಮಾಡ್ತಾ ತುಟಿಗೆ ಮುತ್ತಿಟ್ಟಿದ್ದಾರೆ. ಕೆಲವರು ನಿವೇದಿತಾ ಹಾಗೂ ಚಂದನ್ ಡ್ಯಾನ್ಸ್​ ಅನ್ನು ಹೊಗಳಿದರೆ, ಇನ್ನೂ ಕೆಲವರು ಟೀಕೆ ಮಾಡಿದ್ದಾರೆ ‘ಈ ರೀತಿಯ ವಿಡಿಯೋಗಳನ್ನು ಆನ್​ಲೈನ್​ಲ್ಲಿ ಪೋಸ್ಟ್ ಮಾಡುವ ಅವಶ್ಯಕತೆ ಏನಿದೆ’ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ತಮ್ಮದೆ ಯುಟ್ಯೂಬ್ ಚಾನಲ್ ಹೊಂದಿರುವ ನಿವೇದಿತಾ ಗೌಡ ತಮ್ಮ ದಿನಚರಿಯ ಬಗ್ಗೆ ಅಪ್ ಡೇಟ್ ನೀಡುತ್ತಿರುತ್ತಾರೆ. ಹೊಸ ಹೊಸ ಅಡುಗೆಗಳನ್ನ ಮಾಡುತ್ತಾ, ಬ್ಯೂಟಿ ಟಿಪ್ಸ್ ಗಳನ್ನು ನೀಡುತ್ತಿರುತ್ತಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now