ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಸೂತ್ರಧಾರಿ’ಯಾದ ರ್ಯಾಪರ್ ಚಂದನ್ ಶೆಟ್ಟಿ
ಇದು ನನ್ನ ನಿರ್ಮಾಣದ ಐದನೇ ಚಿತ್ರ. ಈವರೆಗೂ ನಮ್ಮ ಸಂಸ್ಥೆಯ ಮೂಲಕ 180ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ನಡೆಸಿಕೊಟ್ಟಿದ್ದೇನೆ. ನಿರ್ದೇಶನದೊಂದಿಗೆ ವಿತರಕನಾಗೂ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ
“ಸೂತ್ರಧಾರಿ” ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ ತಂಡದವರೇ ಆದ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ನಾಯಕನಾಗಿ, ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ನವರಸನ್.
ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ “ಎಲ್ರ ಕಾಲೆಳಿಯುತ್ತೆ ಕಾಲ”. ಆ ಚಿತ್ರ ರೆಟ್ರೊ ಶೈಲಿಯಲ್ಲಿ ಇರುತ್ತದೆ. “ಸೂತ್ರಧಾರಿ” ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ ಅಂತ ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ಎಲ್ಲರೂ ಗುನಗುವಂತಹ ಹಾಡುಗಳನ್ನು ಕೊಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದರು.
“ಸೂತ್ರಧಾರಿ” ಎಲ್ಲರಿಗೂ ಮೆಚ್ಚುಗೆಯಾಗುವಂತಹ ಕಥಾಹಂದರ ಹೊಂದಿದೆ. ನಾನು ನವರಸನ್ ಅವರ ಬಳಿ ಸಹ ನಿರ್ದೇಶಕನಾಗಿ ಹಾಗೂ ಪಿ.ಕೆ.ಹೆಚ್ ದಾಸ್ ಅವರ ಹತ್ತಿರ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದ್ದ ನಿರ್ದೇಶಕ ಕಿರಣ್ ಕುಮಾರ್, ಅವಕಾಶ ಕೊಟ್ಟ ನವರಸನ್ ಅವರಿಗೆ ಧನ್ಯವಾದ ತಿಳಿಸಿದರು.
ತಮ್ಮ ಪಾತ್ರದ ಬಗ್ಗೆ ನಾಯಕಿ ಅಪೂರ್ವ, ಹಿರಿಯ ನಟ ತಬಲ ನಾಣಿ ಹಾಗೂ ಗಣೇಶ್ ನಾರಾಯಣ್ ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಗೀತರಚನೆ ಮಾಡಿ, ಸಂಭಾಷಣೆ ಬರೆದಿರುವ ಕಿನಾಲ್ ರಾಜ್ ಹಾಗೂ ಸಂಕಲನಕಾರ ಸತೀಶ್ ಚಂದ್ರಯ್ಯ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
