• January 2, 2026

ಬೇಗ ಗುಣಮುಖರಾಗಿ ಅಮ್ಮ: ಹಲ್ಲೆ ಬೆನ್ನಲ್ಲೇ ಹೊಸ ಪೋಸ್ಟ್ ಹಂಚಿಕೊಂಡ ಚಂದನ್ ಕುಮಾರ್

ಸ್ಯಾಂಡಲ್ ವುಡ್ ನಟ ಚಂದನ್ ಕನ್ನಡದ ಜೊತೆಗೆ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಶ್ರೀಮತಿ ಶ್ರೀನಿವಾಸ್ ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಕಿರಿಕ್ ಮಾಡಿಕೊಂಡ ಕಾರಣಕ್ಕೆ ಇಂದು ಮುಂಜಾನೆಯಿಂದಲೇ ಚಂದನ್ ಸುದ್ದಿಯಲ್ಲಿದ್ದಾರೆ. ಈ ಬೆನ್ನಲ್ಲೇ ನಟ ಚಂದನ್ ಭಾವುಕರಾಗಿ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತೆಲುಗು ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಚಂದನ್ ಕ್ಯಾಮೆರಾಮೆನ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ತಂತ್ರಜ್ಞರು ಕೂಡ ಚಂದನ್ ವಿರುದ್ಧ ಕಿಡಿಕಾರಿದ್ದರು. ಬಳಿಕ ಚಂದನ್ ಕ್ಷಮೆ ಕೂಡ ಕೇಳಿದ್ದರು. ಈ ವಿಚಾರ ಅಲ್ಲಿಗೆ ನಿಲ್ಲದೇ ಚಂದನ್‌ಗೆ ಕಪಾಳಮೋಕ್ಷ ಕೂಡ ಮಾಡಲಾಗಿತ್ತು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಚಂದನ್, ಅಮ್ಮನ ಅನಾರೋಗ್ಯದ ಟೆನ್ಷನ್‌ನಲ್ಲಿ ಇದ್ದೆ. ಅಂದು ಆಸ್ಪತ್ರೆಯಿಂದ ನೇರವಾಗಿ ಶೂಟಿಂಗ್‌ಗೆ ತೆರಳಿದ್ದೆ. ಆಗ ಕ್ಯಾಮೆರಾ ಮ್ಯಾನ್ ನನಗೆ ಸ್ವಲ್ಪ ಕಿರಿಕಿರಿ ಮಾಡಿದರು. ಹೀಗಾಗಿ ಆ ಘಟನೆ ನಡೆಯಿತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬೆನ್ನಲ್ಲೇ  ಸೋಶಿಯಲ್ ಮೀಡಿಯಾದಲ್ಲಿ ಅವರು ತನ್ನ ತಾಯಿಯ ಜತೆಯಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬೇಗ ಗುಣಮುಖರಾಗಿ ಅಮ್ಮಾ. ನಿಮ್ಮನ್ನು ನೋಡಿಕೊಳ್ಳಲು ನಾನು ಅಲ್ಲಿರಬೇಕಿತ್ತು. ನಾನು ನಿಮ್ಮನ್ನು ನೋಡಲು ಬರುತ್ತಿದ್ದೇನೆ. `ಲವ್ ಯೂ ಸೋ ಮಚ್’ ಎಂದು ಚಂದನ್ ಕುಮಾರ್ ಬರೆದುಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now