ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸ್ಯಾಂಡಲ್ ವುಡ್ ನಲ್ಲಿ ‘ಕ್ರಾಂತಿ’ ಹರಿಸಲು ಮುಂದಾದ ದರ್ಶನ್: ಅಕ್ಷರ ಕ್ರಾಂತಿ ಆಗಮನಕ್ಕೆ ಡೇಟ್ ಫಿಕ್ಸ್
ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಳಿಕ ಅಭಿಮಾನಿಗಳು ದಚ್ಚು ಚಿತ್ರಕ್ಕಾಗಿ ಕಾದು ಕೂತಿದ್ದಾರೆ. ಯಾವಾಗಪ್ಪ ದರ್ಶನ್ ದರ್ಶನ ಕೊಡ್ತಾರೆ ಎಂದು ಕಾದು ಕೂತಿರೋ ಅಭಿಮಾನಿಗಳಿಗೆ ನಿರ್ಮಾಪಕಿ ಶೈಲಾಜ ನಾಗ್ ಉತ್ತರ ನೀಡಿದ್ದಾರೆ.
ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಕ್ರಾಂತಿ ಸಿನಿಮಾ ಜನವರಿ 26ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ. ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನಟ ದರ್ಶನ್ ಪಾತ್ರ ಮಾಡಿದ್ದು ಎನ್‌ಆರ್‌ಐ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ದರ್ಶನ್ ಗೆ ಜೋಡಿಯಾಗಿ ನಟಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ.
