• January 1, 2026

ಡಬ್ಬಲ್ ಶಾಕ್ ನೀಡಿದ ಬಿಗ್ ಬಾಸ್: ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ ಔಟ್

ಕನ್ನಡದ ಬಿಗ್ ಬಾಸ್ ಓಟಿಟಿ ಮನೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಗಳು ಸಿಗುತ್ತಿವೆ. ಪ್ರತಿವಾರ ಒಬ್ಬೊಬ್ಬರು ಮನೆಯಿಂದ ಹೊರ ಹೋಗುತ್ತಿದ್ದರು.ಆದರೆ ಈ ವಾರ ಬಿಗ್ ಬಾಸ್ ಇಬ್ಬರನ್ನು ಮನೆಯಿಂದ ಹೊರ ಕಳುಹಿಸಿ ಡಬ್ಬಲ್ ಶಾಕ್ ನೀಡಿದೆ. ಪ್ರತಿ ವಾರದ ಕೊನೆಯಲ್ಲಿ ಎಂಟ್ರಿಕೊಡುವ ಸುದೀಪ್ ಮಾತು ಕೇಳಲು ಅಭಿಮಾನಿಗಳು ಕಾದುಕೂತಿರ್ತಾರೆ.ಅಂತೆಯೇ ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಇರುತ್ತೆ. ಅಂತೆಯೇ ಈ ವಾರ ಮನೆಯಿಂದ ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿಯ ಬಿಗ್ ಬಾಸ್ ಜರ್ನಿ ಮುಗಿದಿದ್ದು ಮನೆಯಿಂದ ಹೊರ ನಡೆದಿದ್ದಾರೆ. ಈ ವಾರ ಸೋನು ಎಲಿಮಿನೇಟ್ ಆಗಬಹುದು ಅಂತಲೇ ಸಾಕಷ್ಟು ಮಂದಿ ಅಂದುಕೊಂಡಿದ್ರು.ಆದ್ರೆ ಅಚ್ಚರಿ ಎಂಬಂತೆ ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಮನೆಯಿಂದ ಹೊರ ಕಳುಹಿಸಿಲಾಗಿದೆ. ದೊಡ್ಮನೆಯಲ್ಲಿ ಇದ್ದಷ್ಟು ದಿನವೂ ಚೈತ್ರಾ ಆಲಸ್ಯದಿಂದಲೇ ಇರುತ್ತಿದ್ದರು. ಜಯಶ್ರೀ ಹೊರತು ಪಡಿಸಿ ಹೆಚ್ಚಿಗೆ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಇದೇ ಕಾರಣಕ್ಕೆ ಅವರಿಗೆ ಕಡಿಮೆ ಓಟ್ ಬಂದಿದ್ದು ಇದೀಗ ಮನೆಯಿಂದ ಹೊರ ಬಂದಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಟ್ರೋಪಿ ಗೆಲ್ಲಬೇಕು ಎಂದು ಕನಸು ಕಂಡು ಬಂದಿದ್ದ ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಕನಸು ಭಗ್ನವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now