ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೀರೆ ಬಿಚ್ಚಿ ಹೊಡಿತಿನಿ ಎಂದ ನಟ ಸ್ನೇಹಿತ್: ಮಹಿಳೆಯಿಂದ ದೂರು ದಾಖಲು
ಸೆಪ್ಟಂಬರ್ 24ರಂದು ಸ್ನೇಹಿತ್ ಎದುರು ಮನೆಯ ಮಹಿಳೆ ಅನ್ನಪೂರ್ಣ ತನ್ನ ಪತಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಜಾಗ್ವಾರ್ ಕಾರಿನಲ್ಲಿ ಬಂದ ಸ್ನೇಹಿತ್, ಮಹಿಳೆಯ ಕಾರಿಗೆ ಡಿಕ್ಕಿ ಹೊಡೆಯುವಂತೆ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಅನ್ನಪೂರ್ಣ ಮತ್ತು ಅವರ ಪತಿ ಈ ವಿಚಾರಕ್ಕೆ ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಸ್ನೇಹಿತ್ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ವಿಚಾರಕ್ಕೆ ಮಹಿಳೆ ಹಾಗೂ ಸ್ನೇಹಿತ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸ್ನೇಹಿತ್ ಅನ್ನಪೂರ್ಣ ಅವರಿಗೆ ಸೀರೆ ಬಿಚ್ಚಿ ಹೊಡಿತಿನಿ, ಇಲ್ಲಿಂದ ಹೋಗ್ತಾ ಇರು ಎಂದಿದ್ದಾನೆ. ಜೊತೆಗೆ ಮಹಿಳೆಯ ಪತಿಗೆ ಕಾರಿನಲ್ಲೇ ಹಲ್ಲೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಕಾರು ಪಾರ್ಕಿಂಗ್ ವಿಚಾರಕ್ಕೂ ಸ್ನೇಹಿತ್ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಬಳಿಕ ನಿರ್ಮಾಪಕರ ಮಧ್ಯಸ್ಥಿಕೆ ಬಳಿಕ ರಾಜಿ ಸಂದಾನ ಮಾಡಲಾಗಿತ್ತು.
