• March 14, 2026

ನರೇಶ್, ಪವಿತ್ರಾ ಲೋಕೇಶ್ ಬ್ರೇಕ್ ಅಪ್: ಇಬ್ಬರ ನಡುವೆ ಬಂದ ಮೂರನೇಯಾಕೆ ಯಾರು ಗೊತ್ತಾ?

ನಟ ಸುಚೇಂದ್ರ ಪ್ರಸಾದ್ ರಿಂದ ದೂರವಾದ ನಟಿ ಪವಿತ್ರಾ ಲೋಕೇಶ್ ತೆಲುಗು ನಟ ನರೇಶ್ ಜೊತೆ ಅಪೇರ್ ನಲ್ಲಿರುವುದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರು ಮೈಸೂರಿನ ಲಾಡ್ಜ್ ನಲ್ಲಿ ಇದ್ದ ವೇಳೆ ನರೇಶ್ ಮೂರನೇ ಪತ್ನಿ ರಮ್ಯಾ ಕೈಗೆ ಸಿಕ್ಕಿ ಬಿದ್ದಿದ್ದರು. ಇದೀಗ ತೆಲುಗು ಇಂಡಸ್ಟ್ರಿಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ನರೇಶ್ ಹೆಣ್ಣು ಬಾಕ, ಆತನಿಗೆ ಸಾಕಷ್ಟು ಮಹಿಳೆಯರ ಜೊತೆ ಸಂಬಂಧವಿದೆ ಎಂದು ಸ್ವತಃ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪ ಮಾಡಿದ್ದರು. ಅಲ್ಲದೆ ತನ್ನಿಂದ ಡಿವೋರ್ಸ್ ಪಡೆದುಕೊಳ್ಳದೆ ಪವಿತ್ರಾ ಲೋಕೇಶ್ ಜೊತೆ ಸಂಬಂಧ ಇರಿಸಿಕೊಂಡಿದ್ದಾರೆ ಎಂದಿದ್ದರು. ಇದೀಗ ರಮ್ಯಾ ಹೇಳಿಕೆ ನಿಜವಾಗಿದ್ದು ನರೇಶ್ ಪವಿತ್ರಾ ಲೋಕೇಶ್ ಗೆ ಕೈ ಕೊಟ್ಟು ಮತ್ತೋರ್ವ ಮಹಿಳೆಯ ಹಿಂದೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಸುದ್ದಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದೆ. ಕಾರಣ ಪವಿತ್ರಾಗೆ ಗುಡ್ ಬೈ ಹೇಳಿರೋ ನರೇಶ್ ಮತ್ತೊಬ್ಬ ಮಹಿಳೆಗೆ ಹತ್ತಿರವಾಗಿದ್ದಾರೆ ಎನ್ನಲಾಗುತ್ತಿದೆ, ಆದರೆ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ನಿಜವಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಈಗಾಗ್ಲೆ ಮೂರು ಮದುವೆಯಾಗಿರೋ ನರೇಶ್ ಪವಿತ್ರಾ ಲೋಕೇಶ್ ಜೊತೆ ನಾಲ್ಕನೇ ಸಂಬಂಧ ಇರಿಸಿಕೊಂಡಿದ್ದರು. ಪವಿತ್ರಾ ಲೋಕೇಶ್ ರನ್ನು ಮದುವೆಯಾಗದೆ ಆಕೆಯೊಂದಿಗೆ ಇರುತ್ತೇನೆ ಎಂದು ನರೇಶ್ ಹೇಳಿಕೊಂಡಿದ್ದರು. ಆದರೆ ಇದೀಗ ಇಬ್ಬರು ಒಪ್ಪಂದದ ಮೇರೆಗೆ ದೂರ ದೂರವಾಗಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಆದರೆ ಆ ಮಹಿಳೆ ಯಾರು? ಆಕೆ ಸಿನಿಮಾ ರಂಗದವರ ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now