ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ ಮತ್ತೆ ಮುಂದೂಡಿಕೆ
ಸಮಾವೇಶದ ರೂಪುರೇಷೆ, ಸಿದ್ದತೆ ಕುರಿತು ಚರ್ಚಿಸಿ ಎಲ್ಲ ತಯಾರಿ ಮಾಡಿಕೊಳ್ಳಲು ಸಚಿವರು ಮತ್ತು ಶಾಸಕರ ತಂಡಕ್ಕೆ ಸಿಎಂ ನಿರ್ದೇಶನ ನೀಡಿದರು. ಆದರೆ ಇದೀಗ ಆರ್ ಎಸ್ ಎಸ್ ಕಚೇರಿಯಿಂದ ಮತ್ತೆ ಸಿಎಂಗೆ ಬುಲಾವ್ ಬಂದಿದ್ದು ಮತ್ತೊಮ್ಮೆ ಸಾಧನಾ ಸಮಾವೇಷ ಮುಂದೂಡಲಾಗಿದೆ.
ಆಗಸ್ಟ್ 28 ರಂದು ಪುತ್ತೂರಿನಲ್ಲಿ ಸಂಘದ ಪ್ರಾಂತ ಬೈಠಕ್ ನಡೆಯಲಿದೆ. ಈ ಬೈಠಕ್ಗೆ ಈಗಾಗಲೇ ಸಿದ್ದತೆ ಪೂರ್ಣಗೊಂಡಿದೆ. ಆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಬ್ಬರೂ ಭಾಗಿ ಆಗಬೇಕಿದೆ. ಹೀಗಾಗಿ ಸರ್ಕಾರದ ಸಾಧನಾ ಸಮಾವೇಶದ ದಿನಾಂಕ ಬದಲಿಸುವಂತೆ ತಿಳಿಸಿದ್ದಾರೆ. ಹೀಗಾಗಿ ಸರ್ಕಾರದ ಸಮಾವೇಶ ಮತ್ತೆ ಮುಂದುಡೂವ ಬಗ್ಗೆ ಚರ್ಚೆ ಆಗಿದೆ. ಬಹುತೇಕ ಸಮಾವೇಶ ಮತ್ತೆ ಮುಂದೂಡಿಕೆ ಆಗಲಿದೆ.
