ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಾಲಿವುಡ್ ಖ್ಯಾತ ಸಿಂಗರ್ ಮೇಲೆ ಅತ್ಯಾಚಾರ ಆರೋಪ: FIR ದಾಖಲು
ಅನೇಕ ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯನ್ನು ರಾಹುಲ್ ಜೈನ್ ಇದೇ ಆಗಸ್ಟ್ 11 ರಂದು ತಮಗೂ ಪರ್ಸನಲ್ ಆಗಿ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎಂದು ಕೆಲಸದ ನೆಪದಲ್ಲಿ ನನ್ನನ್ನು ಫ್ಲ್ಯಾಟ್ ಗೆ ಕರೆಸಿಕೊಂಡಿದ್ದಾರೆ. ಅವರ ಮಾತನ್ನು ನಿಜವೆಂದು ನಂಬಿಕ ನಾನು ಅವರ ಮನೆಗೆ ಹೋದೆ. ಅವರು ನನ್ನನ್ನು ತಮ್ಮ ಬೆಡ್ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ ಎಂದು ಮುಂಬೈನಲ್ಲಿ ಮಹಿಳೆ ದೂರು ನೀಡಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರೋ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಗರ್ ರಾಹುಲ್ ಜೈನ್ ಹೀಗೆ ಮಹಿಳೆಯರು ನನ್ನ ಮೇಲೆ ಈ ರೀತಿಯ ದೂರು ನೀಡುವುದು ಹೊಸದಲ್ಲ. ಈ ಹಿಂದೆಯೂ ಒಬ್ಬರು ದೂರು ಕೊಟ್ಟಿದ್ದರು. ಆದರೆ, ನಾನು ಅದರಲ್ಲಿ ಗೆದ್ದೆ. ನನ್ನಿಂದ ತಪ್ಪಾಗಿಲ್ಲ ಅಂತ ನನಗೆ ನ್ಯಾಯ ಸಿಕ್ಕಿತು. ಈಗ ಆರೋಪ ಮಾಡಿರುವ ಹುಡುಗಿ ಯಾರೆಂದು ನನಗೆ ಗೊತ್ತಿಲ್ಲ. ಈ ಹಿಂದೆ ದೂರು ಕೊಟ್ಟಿರುವ ಹುಡುಗಿಗೂ ಈಕೆಗೂ ಏನಾದರೂ ಸಂಬಂಧ ಇದೆಯಾ ತನಿಖೆ ಮಾಡಬೇಕು ಎಂದಿದ್ದಾರೆ.
