• March 17, 2026

ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಬಿಪಾಶಾ ಬಸು: ಮೊದಲ ಮಗುವಿನ ಆಗಮನದ ಖುಷಿಯಲ್ಲಿ ಹಾಟ್ ಬ್ಯೂಟಿ

ಅಜನಬಿ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟು ಬಳಿಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಬಿಪಾಶಾ ಬಸು ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮೊದಲ ಮಗುವಿನ ಆಗಮನಕ್ಕೆ ಎದುರು ನೋಡುತ್ತಿರುವ ಬಿಪಾಶಾ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಈ ಮೊದಲು ಬಿಪಾಶಾ ಪ್ರಗ್ನೆಂಟ್ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಬಿಪಾಶಾ ಆಗಲಿ ಅಥವಾ ಪತಿ ಕರಣ್ ಗ್ರೋವರ್ ಆಗಲಿ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಇದೀಗ ಬಿಪಾಶಾ ಪತಿ ಜೊತೆಗೆ ತೆಗೆಸಿಕೊಂಡಿರುವ ಬೇಬಿ ಬಂಪ್ ಫೋಟೋದ ಮೂಲಕ ವಿಷಯ ತಿಳಿಸಿದ್ದಾರೆ. ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿರುವಾಗಲೆ ಬಿಪಾಶಾ ಬಸು, 2016ರಲ್ಲಿ ಸಹನಟ ಕರಣ್ ಸಿಂಗ್ ಗ್ರೋವರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ ಹಸೆಮಣೆ ಏರಿದ್ದರು. ಮದುವೆಯಾಗಿ ಆರು ವರ್ಷದ ಬಳಿಕ ಬಿಪಾಶಾ ದಂಪತಿಗಳು ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now