• June 19, 2026

ತೆರೆಗೆ ಬರಲಿದೆ ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್

ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮವನ್ನು ದಾವಣಗೆರೆಯಲ್ಲಿ ಸಾಕಷ್ಟು ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಲಾಗುತ್ತಿದೆ. ನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ಇಡೀ ಕರುನಾಡೇ ಆಗಮಿಸಿದ್ದು ಸ್ಥಳದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೇ ಖುಷಿಯಲ್ಲಿ ತೆಲಂಗಾಣದ ಉದ್ಯಮಿ ಶ್ರೀಧರ್ ರಾವ್ ಅಭಿಮಾನಿಗಳಿಗೆ ಖುಷಿಯ ವಿಷಯವೊಂದನ್ನ ತಿಳಿಸಿದ್ದಾರೆ. ಈಗಾಗ್ಲೆ ಸಾಕಷ್ಟು ರಾಜಕಾರಣಿಗಳ ಬಯೋಪಿಕ್ ತೆರೆಗೆ ಬಂದಿದೆ. ಇದೀಗ ಸಿದ್ದರಾಮಯ್ಯ ಅವರ ಜೀವನ ಕುರಿತಾದ ಚಿತ್ರ ತೆರೆಗೆ ತರಲು ಶ್ರೀಧರ್ ರಾವ್ ರೆಡಿಯಾಗಿದ್ದಾರೆ.ಈ ಬಗ್ಗೆ ಮಾತನಾಡಿದ ಶ್ರೀಧರ್ ರಾವ್,  ‘ಸಿದ್ದರಾಮಯ್ಯನವರ ಅನುಮತಿ ಪಡೆದುಕೊಂಡೇ ಸಿನಿಮಾ ಮಾಡಲಾಗುವುದು. ಇದು ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು, ದೊಡ್ಡ ಬಜೆಟ್ ನಲ್ಲಿ ಸಿನಿಮಾ ತಯಾರಾಗಲಿದೆ ಎಂದರು.  ಸಿದ್ದರಾಮಯ್ಯ ಅವರ ಜೀವನ, ರಾಜಕೀಯ ಎಂಟ್ರಿ, ಮುಖ್ಯಮಂತ್ರಿಯಾದಾಗಿನ ಅವರ ಸಾಧನೆ ಸೇರಿದಂತೆ ಸಾಕಷ್ಟು ವಿಷಯಗಳು ಸಿನಿಮಾದಲ್ಲಿ ಇರಲಿದೆಯಂತೆ ಸಿನಿಮಾ ರಂಗಕ್ಕೆ ಸಿದ್ದರಾಮಯ್ಯ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇದೇ ಕಾರಣಕ್ಕೆ ಸಿನಿ ರಂಗ ಅವನ್ನು ವಿಭಿನ್ನ ರೀತಿಯಲ್ಲಿ ಸ್ಮರಿಸುತ್ತಿದೆ. ಈಗಾಗಲೇ ಸಿದ್ದರಾಮೋತ್ಸವದಲ್ಲಿ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಹಂಸಲೇಖ ಕೂಡ ಒಂದು ಹಾಡನ್ನು ಸಿದ್ದರಾಮಯ್ಯನವರಿಗೆ ಅರ್ಪಿಸಿದ್ದಾರೆ. ಇದೀಗ ಸಿದ್ದರಾಮಯ್ಯ ಕುರಿತು ಸಿನಿಮಾ ಮಾಡಲು ಶ್ರೀಧರ್ ಮುಂದಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now